ಅಭಿಮಾನಿಗಳೆಲ್ಲಾ ಕುತೂಹಲದಿಂದ ಕಾಯುತ್ತಿದ್ದ ಶೋಭಿತಾ-ನಾಗಚೈತನ್ಯ ಮದುವೆ ಡೇಟ್ ಕೊನೆಗೂ ಫಿಕ್ಸ್ ಆಗಿದೆ.
ಇದೇ ಡಿಸೆಂಬರ್ 4ರಂದು ಶೋಭಿತಾ ಜೊತೆ ಸಮಂತಾ ಮಾಜಿ ಪತಿ ನಾಗಚೈತನ್ಯ ಮದುವೆ ವಿದೇಶದಲ್ಲಿ ಜರುಗಲಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಆ ನಂತರ ಹೈದರಾಬಾದ್ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮದಲ್ಲಿ ನಡೆಯಲಿದೆ ಎನ್ನಲಾಗಿದೆ.
ಈ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ಕುಟುಂಬಸ್ಥರು ಅಧಿಕೃತವಾಗಿ ತಿಳಿಸುವವರೆಗೂ ಕಾಯಬೇಕಿದೆ.
ನಾಗ ಚೈತನ್ಯ ಅವರು 2017ರಲ್ಲಿ ನಟಿ ಸಮಂತಾ ರುತ್ ಪ್ರಭು ಅವರನ್ನು ಮದುವೆಯಾಗಿದ್ದರು. 4 ವರ್ಷಗಳ ನಂತರ ಅಂದರೆ 2021ರಲ್ಲಿ ಕೆಲ ಕಾರಣಗಳಿಂದ ಇಬ್ಬರು ಬೇರೆ ಬೇರೆಯಾಗಿ ವಿಚ್ಛೇದನ ಕೂಡ ಪಡೆದುಕೊಂಡರು.
ಸಮಂತಾರನ್ನ ಬಿಟ್ಟ ನಾಗಚೈತನ್ಯ ಇತ್ತೀಚೆಗೆ ನಟಿ ಶೋಭಿತಾ ಧೂಳಿಪಾಲ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮದುವೆ ಯಾವಾಗ ಎನ್ನುವ ಕುತೂಹಲವಿತ್ತು. ಸದ್ಯ ಇದೀಗ ಆನ್ಸರ್ ಸಿಕ್ಕಂತಾಗಿದೆ.



