HomeGadag Newsಮಹನೀಯರ ಆದರ್ಶಗುಣಗಳನ್ನು ಪಾಲಿಸಿ :ಶ್ರೀನಿವಾಸ ಹುಯಿಲಗೋಳ

ಮಹನೀಯರ ಆದರ್ಶಗುಣಗಳನ್ನು ಪಾಲಿಸಿ :ಶ್ರೀನಿವಾಸ ಹುಯಿಲಗೋಳ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಕನ್ನಡ ಮಾತೆ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಿದ ಮಹನೀಯರ ಹೋರಾಟದ ಇತಿಹಾಸವನ್ನು ಅರಿತು ಅವರ ಆದರ್ಶ ಗುಣಗಳನ್ನು ಹಾಗೂ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಾಲೆಯ ಮುಖ್ಯೋಪಾಧ್ಯಾಯ ಎಂ.ಆರ್. ಡೊಳ್ಳಿನ, ಶಿಕ್ಷಕಿ ಪಾರ್ವತಿ ಕಟ್ಟಿಮನಿ, ವಿದ್ಯಾರ್ಥಿಗಳಾದ ಅನುಶ್ರೀ ಹಿರೇಮಠ, ತನುಶ್ರೀ ಹಾದಿ ಹಾಗೂ ಶ್ರೇಯಾ ತಿಪ್ಪನ್ನವರ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೈಭವ್ ತಿಪ್ಪನ್ನವರ್ ಹಾಗೂ ಸಂಗಡಿಗರು, ಫಾತೀಮಾಲು ಬಾನು ಸಂಗಂಕರ್ ಹಾಗೂ ಸಂಗಡಿಗರು ಕನ್ನಡ ನಾಡು-ನುಡಿಯ ಕುರಿತು ಹಾಡಗಳನ್ನು ಹಾಡಿದರು.

ವೀಣಾ ಹುಬ್ಬಳ್ಳಿ ಸ್ವಾಗತಿಸಿದರು. ರೇಣುಕಾ ವೆಂಕಟಾಪುರ ನಿರೂಪಿಸಿದರು. ಅಂಜುಮ್ ತಹಸೀಲ್ದಾರ ವಂದಿಸಿದರು. ಈ ಸಂದರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕಿಯರಾದ ಅಫೀಜಾ ಬೇಗಂ ಬಾಗಲಕೋಟೆ, ಅರ್ಚನಾ ಗಿರಿತಿಮ್ಮಣ್ಣನವರ್, ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img