ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದ ರಥೋತ್ಸವವನ್ನು ಸಂಪ್ರದಾಯದಂತೆ ಸಡಗರ, ಸಂಭ್ರಮ ಮತ್ತು ಶೃದ್ಧಾ ಭಕ್ತಿಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ರಥೋತ್ಸವವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿ, ಅಜ್ಞಾನ, ಅಂಧಕಾರ ಕಳೆದು ಜ್ಞಾನದ ಜ್ಯೋತಿ ಬೆಳಗಿಸುವುದು ದೀಪಾವಳಿ ಹಬ್ಬದ ವೈಶಿಷ್ಠ್ಯವಾಗಿದೆ. ಧರ್ಮ, ಸಂಸ್ಕೃತಿ, ಜ್ಞಾನ ಮತ್ತು ಆಧ್ಯಾತ್ಮದ ಸಂಕೇತವಾಗಿ, ದೀಪ ಬೆಳಗಿದಂತೆ ಎಲ್ಲರ ಜೀವನದಲ್ಲಿ ಬೆಳಕು ಪ್ರಜ್ವಲಿಸಬೇಕು, ಸಮಾಜದಲ್ಲಿ ಮತ್ತೊಬ್ಬರ ಬಾಳಿಗೆ ಬೆಳಕಾಗುವ ಕೆಲಸ ಮಾಡಬೇಕೇ ಹೊರತು ಕತ್ತಲೆಗೆ ತಳ್ಳುವ ಕಾರ್ಯವನ್ನು ಮಾಡಬಾರದು. ಜಾತ್ರೆ, ಹಬ್ಬ-ಹರಿದಿನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಪ್ರತಿಯೊಂದು ಹಬ್ಬಕ್ಕೂ ಧಾರ್ಮಿಕ ಹಿನ್ನೆಲೆಯಿದೆ. ಇಲ್ಲಿನ ಹಾವಳಿ ಹನುಮಂತ ದೇವರು ವಿಶೇಷ ಶಕ್ತಿ ಹೊಂದಿದ ಜಾಗೃತ ದೇವರಾಗಿದ್ದು, ಇಲ್ಲಿನ ಭಕ್ತರು ಹಮ್ಮಿಕೊಳ್ಳುತ್ತಿರುವ ಕಾರ್ಯಗಳು ಶ್ಲಾಘನೀಯ ಎಂದು ನುಡಿದರು.
ಶಾಸಕ ಡಾ. ಚಂದ್ರು ಲಮಾಣಿ ರಥಕ್ಕೆ ಪೂಜೆ ಸಲ್ಲಿಸಿದರು. ಈಶ್ವರಪ್ಪ ಕುಂಬಾರ, ನೀಲಪ್ಪ ಕರ್ಜೇಕಣ್ಣವರ, ನಾಗರಾಜ ಚಿಂಚಲಿ, ಮಹೇಶ ಹೊಗೆಸೊಪ್ಪಿನ, ಸುನೀಲ ಮಹಾಂತಶೆಟ್ಟರ, ವಿಜಯಕುಮಾರ ಹತ್ತಿಕಾಳ, ನವೀನ ಬೆಳ್ಳಟ್ಟಿ, ಮಾಂತೇಶ ಅಣ್ಣಿಗೇರಿ, ಅನಿಲ ಮುಳಗುಂದ, ಹಿಂದೂ ಮಹಾಸಭಾ ಗಣಪತಿ ಅಧ್ಯಕ್ಷ ಫಕ್ಕೀರೇಶ ಅಣ್ಣಿಗೇರಿ, ಮಾಂತೇಶ ಗೋಡಿ, ನವೀನ ಕುಂಬಾರ, ಮಂಜುನಾಥ ಕೊಡಳ್ಳಿ, ಜಗದೀಶ ಕುಂಬಾರ, ಬಸವರಾಜ ಗೋಡಿ, ನಿಂಗಪ್ಪ ಬನ್ನಿ, ಶಕ್ತಿ ಕತ್ತಿ, ಈರಣ್ಣ ಪೂಜಾರ, ಬಸವರಾಜ ಚಕ್ರಸಾಲಿ, ಅರ್ಚಕ ಮುರಘೇಂದ್ರಸ್ವಾಮಿ ಹಿರೇಮಠ, ಭರಮಪ್ಪ ಅಣ್ಣಿಗೇರಿ, ಹಿಂದೂ ಮಹಾಸಭಾ ಗಣಪತಿ ಸೇವಾ ಮಂಡಳಿ, ಹಾವಳಿ ಆಂಜನೇಯ ಭಜನಾ ಮಂಡಳಿ, ಯುವಕ ಮಂಡಳಿ ಸದಸ್ಯರು ಸೇರಿ ಸಾರ್ವಜನಿಕರು ಪಾಲ್ಗೊಂಡಿದ್ದರು.