ವಿಜಯಸಾಕ್ಷಿ ಸುದ್ದಿ, ಮುಂಡರಗಿ : ನಗರದ ಎ.ಪಿ.ಎಂ.ಸಿಯಲ್ಲಿ ಸರ್ಕಾರದ ಸೂರ್ಯಕಾಂತಿ ಬೆಂಬಲ ಬೆಲೆ ಯೋಜನೆ-2024 ಅಡಿಯಲ್ಲಿ ಕಲಕೇರಿ ಎಣ್ಣೆ ಬೀಜ ಬೆಳೆಗಾರರ ಸಂಸ್ಕರಣಾ ಸಹಕಾರ ಸಂಘದ ಮೂಲಕ ರೈತರು ಬೆಳೆದ ಸೂರ್ಯಕಾಂತಿ ಖರೀದಿಗೆ ಮುಂಡರಗಿ ತಾಲೂಕಿನ ತಹಸೀಲ್ದಾರ ಎರಿಸ್ವಾಮಿ ಪಿ.ಎಸ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಂಡರಗಿ ಟಿ.ಎ.ಪಿ.ಸಿ.ಎಂ.ಎಸ್‌ನ ಅಧ್ಯಕ್ಷ ಮುದುಕನಗೌಡ ಎಸ್.ಪಾಟೀಲ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಜೈ ರಾಘವೇಂದ್ರ, ಎಣ್ಣೆ ಬೀಜ ಬೆಳೆಗಾರರ ಸಂಸ್ಕರಣಾ ಸಹಕಾರ ಸಂಘದ ಅಧ್ಯಕ್ಷ ಯಂಕಪ್ಪ ಹುಳಕಣ್ಣವರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವನಗೌಡ ಪಾಟೀಲ, ಗದಗ ವಿಭಾಗ ಮಟ್ಟದ ಅಧ್ಯಕ್ಷರು ಹಾಗೂ ವಕೀಲರಾದ ಮಲ್ಲನಗೌಡ ಪಾಟೀಲ, ಮುಂಡರಗಿ ಟಿ.ಎ.ಪಿ.ಸಿ.ಎಂ.ಎಸ್‌ನ ಮುಖ್ಯ ಕಾರ್ಯನಿರ್ವಾಹಕ ಸಿದ್ದಣ್ಣ ತಳಕಲ್ಲ, ಮುಖ್ಯ ಕಾರ್ಯನಿರ್ವಾಹಕ ರಾಜಾಭಕ್ಷಿ ಹರ್ಲಾಪೂರ, ಬಸವರಾಜ್ ಎಲಿಗಾರ, ಎನ್.ಎ. ಖತೀಬ, ರೈತ ಮುಖಂಡರಾದ ಶಿವಾನಂದ ಇಟಗಿ, ಹಿರೇಗೌಡರ್, ರವಿ ಭಂಡಾರಿ, ಮಲ್ಲಿಕಾರ್ಜುನ್ ಭಂಡಾರಿ, ದೇವಪ್ಪ ಮಡಿವಾಳರ, ವಿರೂಪಾಕ್ಷಗೌಡ ಪಾಟೀಲ ಮುಂತಾದವರಿದ್ದರು.