HomeKarnataka Newsಮುಡಾ ಹಗರಣ: ವಿಚಾರಣೆ ವೇಳೆ ಸಿದ್ದರಾಮಯ್ಯ ಅವರು ಸಿಎಂ ಅಲ್ಲ. ಒಬ್ಬ ಆರೋಪಿ ಅಷ್ಟೇ -...

ಮುಡಾ ಹಗರಣ: ವಿಚಾರಣೆ ವೇಳೆ ಸಿದ್ದರಾಮಯ್ಯ ಅವರು ಸಿಎಂ ಅಲ್ಲ. ಒಬ್ಬ ಆರೋಪಿ ಅಷ್ಟೇ – ಸ್ನೇಹಮಯಿ ಕೃಷ್ಣ

For Dai;y Updates Join Our whatsapp Group

ಮೈಸೂರು: ಸಿಎಂ ಸಿದ್ದರಾಮಯ್ಯ ಉಪಚುನಾವಣೆ ಅಖಾಡದಲ್ಲಿ ಅಬ್ಬರಿಸುತ್ತಿರುವಾಗಲೇ, ಅವರಿಗೆ ಮುಡಾ ಹಗರಣ ಮಗ್ಗಲ ಮುಳ್ಳಾಗಿ ಕಾಡುತ್ತಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆ ಎದುರಿಸುತ್ತಿರುವ ಕುರಿತು ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇವತ್ತಿನ ವಿಚಾರಣೆ ವೇಳೆ ಸಿದ್ದರಾಮಯ್ಯ ಅವರು ಸಿಎಂ ಅಲ್ಲ. ಒಬ್ಬ ಆರೋಪಿ ಅಷ್ಟೇ. ಇದನ್ನು ತನಿಖಾಧಿಕಾರಿ ಮರೆಯಬಾರದು ಎಂದು ಹೇಳಿದರು.

ಸಿಎಂಗೆ ನಿರ್ದಿಷ್ಟವಾಗಿ ಕೆಲವು ಪ್ರಶ್ನೆ ಕೇಳಲು ದೂರುದಾರನಾಗಿ ನಾನು ಒಂದು ಮನವಿಯನ್ನು ಲೋಕಾಯುಕ್ತರಿಗೆ ಕೊಟ್ಟಿದ್ದೇನೆ. ತನಿಖಾಧಿಕಾರಿ ಆ ಪ್ರಶ್ನೆಗಳನ್ನು ಆರೋಪಿ ಸ್ಥಾನದಲ್ಲಿ ಇರುವವರಿಗೆ ಕೇಳಬೇಕು. ಕೇಳದೆ ಇದ್ದರೆ ವಿಚಾರಣೆ ಪರಿಪೂರ್ಣ ಆಗಲ್ಲ. ಒಂದು ವೇಳೆ ಅವರು ಪ್ರಶ್ನೆ ಕೇಳದೆ ಇದ್ದರೆ ಲೋಕಾಯುಕ್ತ ತನಿಖಾಧಿಕಾರಿ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img