HomeLife Styleರೋಟರಿ ಸಂಸ್ಥೆ ಗದಗ-ಬೆಟಗೇರಿಯ 80ನೇ ಸನದು ಪ್ರಧಾನ ದಿನಾಚಾರಣೆ

ರೋಟರಿ ಸಂಸ್ಥೆ ಗದಗ-ಬೆಟಗೇರಿಯ 80ನೇ ಸನದು ಪ್ರಧಾನ ದಿನಾಚಾರಣೆ

For Dai;y Updates Join Our whatsapp Group

Spread the love

ರೊ.ಅಶೋಕ ನಾಯ್ಕರವರು ಬೆಳಗಾವ್ ನಗರದಲ್ಲಿ ಜನಿಸಿ ತಮ್ಮ ವಿದ್ಯಾಭ್ಯಾಸವನ್ನು ಬೆಳಗಾವಿಯಲ್ಲಿಯೇ ಪೂರೈಸಿದ್ದಾರೆ. ಬಿ.ಎಸ್‌ಸಿ ಪದವೀಧರರಾದ ಇವರು ಬೆಳಗಾವಿಯ ಪ್ರಮುಖ ಲ್ಯಾಂಡ್ ಡೆವೆಲಪ್‌ರ್ ಹಾಗೂ ಬಿಲ್ಡರ್‌ರಾಗಿದ್ದು ಅನೇಕ ಬೃಹತ್ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇವರು 1998ರಲ್ಲಿ ರೋಟರಿ ಸಂಸ್ಥೆ ಬೆಳಗಾವಿ ಸೌತ್ ಸಂಸ್ಥೆಗೆ ಸಕ್ರೀಯ ಸದಸ್ಯರಾಗಿ ಸೇರ್ಪಡೆಗೊಂಡರು.  ಇವರು ತಮ್ಮ ಸಂಸ್ಥೆಯ ರೋಟರಿಯ ಎಲ್ಲ ಪ್ರಮುಖ ವಿಭಾಗಗಳ ನಿರ್ದೇಶಕರಾಗಿ ಹಾಗೂ ರೋಟರಿಯ ಯೋಜನೆಗಳಿಗೆ ಹಣ ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಶ್ರೀಯುತರು 2007-08 ರೋಟರಿ ಸಾಲಿಗೆ ಸಂಸ್ಥೆಯ ಕಾರ್ಯದರ್ಶಿಗಳಾಗಿ ಹಾಗೂ 2021-22ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ತಮ್ಮ ಅಧ್ಯಕ್ಷೀಯ ಸೇವಾ ಅವಧಿಯಲ್ಲಿ ರೋಟರಿ ಅಂತಾರಾಷ್ಟಿçÃಯ ಪ್ರತಿಷ್ಠಾನಕ್ಕೆ ವೈಯಕ್ತಿಕವಾಗಿ 85.000 ಯು.ಎಸ್ ಡಾಲರ್ ದೇಣಿಗೆಯನ್ನು ನೀಡಿ ರೋಟರಿಯ ಮೇಜರ್ ಡೋನರ್ ಪ್ರಶಸ್ತಿಯನ್ನು ಪಡೆದರು. ಅಲ್ಲದೆ ಇದೇ ಅವಧಿಯಲ್ಲಿ ರೋಟರಿಯ ಗ್ಲೋಬಲ್ ಗ್ರ್ಯಾಂಟನಡಿ1.87.7000 ಯು.ಎಸ್ ಡಾಲರ್ ಮೌಲ್ಯದ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಹೆಮ್ಮೆಯ ವಿಷಯವಾಗಿದೆ. ಇವರ ಅಧ್ಯಕ್ಷಾವಧಿಯ ಸೇವೆಯನ್ನು ಪರಿಗಣಿಸಿ ಇವರಿಗೆ ರೋಟರಿ ಜಿಲ್ಲೆಯು ಉತ್ತಮ ಕ್ಲಬ್, ಉತ್ತಮ ಅಧ್ಯಕ್ಷ ಅಲ್ಲದೆ ಇತರೆ 14 ಜಿಲ್ಲಾ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ರೊ. ಅಶೋಕ ನಾಯ್ಕರವರು ಕಳೆದ ೨25 ವರ್ಷಗಳಿಂದ ರೋಟರಿ ಜಿಲ್ಲೆ 3170ದಲ್ಲಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ 2012 ಹಾಗೂ 2018ರ ಜಿಲ್ಲಾ ಸಮ್ಮೇಳನದ ಕ್ಯಾಟರಿಂಗ ಕಮಿಟಿಯ ಚೇರಮನ್ನರಾಗಿ, 2011-12 ಜಿಲ್ಲಾ ಕಾರ್ಯದರ್ಶಿಯಾಗಿ, 2017-18ರಲ್ಲಿ ಗೌರ್ನರ್ ಏಡ್ ಆಗಿ, 2022-23 ಜಿಲ್ಲಾ ಸಮ್ಮೆಳನದ ಚೇರಮನ್ನರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ 2023-24ನೇ ಸಾಲಿನಲ್ಲಿ ಚೀಫ್ ಅಸಿಸ್ಟಂಟ್ ಗವರ್ನರರಾಗಿ ಉತ್ತಮ ಅಸಿಸ್ಟಂಟ್ ಗವರ್ನರ್ ಹಾಗೂ ರೋಟರಿ ಪ್ರತಿಷ್ಠಾನದ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಶ್ರೀಯುತರು ಜಿಲ್ಲಾ ಕಾರ್ಯದರ್ಶಿ ಇವೆಂಟ್ಸ ಹಾಗೂ ಜಿಲ್ಲಾ ಕಾರ್ಯದರ್ಶಿ ಎನ್ಯುವಲ್ ಗಿವಿಂಗ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರು ತಮ್ಮ ಸಾರ್ವಜನಿಕ ಸೇವೆಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದು ಅವುಗಳಲ್ಲಿ ಪ್ರಮುಖವಾಗಿ ಮಹಾರಾಷ್ಟ್ರದ ಪ್ರಮುಖ ಪತ್ರಿಕೆಯಾದ ಸಕಾಲ ಇದರ ಮಹಾರಾಷ್ಟ್ರ ಐಕಾನ್ ಪ್ರಶಸ್ತಿ ಹಾಗೂ ಭಾರತ ಸರ್ಕಾರದ ಮಾನವ ಹಕ್ಕು ಭಾರತೀಯ ಐಕಾನ್ ಪ್ರಶಸ್ತಿ ಮುಂತಾದವು ಸೇರಿವೆ. ಇವರು ಕನಾಟಕ ರಾಜ್ಯ ಮಾನವ ಹಕ್ಕು ಸಂಸ್ಥೆಯ ಚೇರಮನ್ನರಾಗಿ, ನೇಸರ್ಗಿಯ ಸರ್ಕಾರಿ ಐ.ಟಿ.ಐ ಕಾಲೇಜಿನ ನಿದೇಶಕರಾಗಿ, ಕರ್ನಾಟಕ ರಾಜ್ಯ ಬಾಡಿ ಬಿಲ್ಡಿಂಗ ಅಸೋಸಿಯೇಶನ್ ಸದಸ್ಯರಾಗಿ, ರೆಡ್ ಕ್ರಾಸ್ ಸೊಸಾಯಿಟಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಇವರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಚಿತ್ರ ನಟ ಹಾಗೂ ನಟಿಯರನ್ನು ಆಹ್ವಾನಿಸಿದ್ದಾರೆ. ರೋಟರಿ ಸಂಸ್ಥೆ ಗದಗ-ಬೆಟಗೇರಿಯ ೮೦ನೇ ಸನದು ಪ್ರಧಾನ ದಿನಾಚಾರಣೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಸಂಸ್ಥೆಯು ಶ್ರೀಯುತರನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ.

-ರೋ.ಬಾಲಕೃಷ್ಣ ಕಾಮತ್.

ಕಾರ್ಯದರ್ಶಿಗಳು,

ರೋಟರಿ ವೆಲ್‌ಫೇರ್ ಸೊಸೈಟಿ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!