ದಕ್ಷಿಣ ಕೊರಿಯಾದಲ್ಲಿ ಜಾರಿಗೊಳಿಸಿದ್ದ ಮಿಲ್ಟ್ರಿ ಆಡಳಿತ ವಾಪಸ್‌!

0
Spread the love

ಸಿಯೋಲ್:- ದಕ್ಷಿಣ ಕೊರಿಯಾದಲ್ಲಿ ಮಂಗಳವಾರ ರಾತ್ರಿ ಜಾರಿಗೊಳಿಸಿದ್ದ ಮಿಲ್ಟ್ರಿ ಆಡಳಿತವನ್ನು ಅಧ್ಯಕ್ಷ ಯುನ್ ಸುಕ್ ಯೋಲ್ ಅವರು ಹಿಂಪಡೆದು ಆದೇಶ ಹೊರಡಿಸಿದ್ದಾರೆ.

Advertisement

ಶಾಸಕರು ಭದ್ರತಾ ಪಡೆಗಳನ್ನು ಧಿಕ್ಕರಿಸಿ ಅವರ ಘೋಷಣೆಗೆ ವಿರುದ್ಧವಾಗಿ ಮತ ಚಲಾಯಿಸಿದರು. ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು ಹೋರಾಟ ನಡೆಸಿದರು. ಇದರ ಬೆನ್ನಲ್ಲೇ ಸೇನಾಡಳಿತ ವಾಪಸ್‌ ತೆಗೆದುಕೊಳ್ಳಲಾಗಿದೆ.

ದಕ್ಷಿಣ ಕೊರಿಯಾದ ಅಧ್ಯಕ್ಷ ಸುಕ್-ಯೋಲ್ ಮಂಗಳವಾರ ರಾತ್ರಿ ಆಘಾತಕಾರಿ ಘೋಷಣೆ ಮಾಡಿದ್ದರು. ದೇಶದಲ್ಲಿ ರಾಷ್ಟ್ರೀಯ ತುರ್ತುಸ್ಥಿತಿ ಮತ್ತು ಮಿಲಿಟರಿ ಆಡಳಿತವನ್ನು ಘೋಷಿಸಲಾಗಿತ್ತು. ಅಧ್ಯಕ್ಷ ಯುನ್ ಸುಕ್-ಯೋಲ್ ಅವರ ಘೋಷಣೆಯ ನಂತರ, ದಕ್ಷಿಣ ಕೊರಿಯಾದ ಶಾಸಕರು ಸಮರ ಕಾನೂನನ್ನು ಬಲವಾಗಿ ವಿರೋಧಿಸಿದರು.

ಸೇನಾಡಳಿತ ಜಾರಿ ಆದೇಶದಿಂದ ಮತ್ತಷ್ಟು ರಾಜಕೀಯ ಬಿಕ್ಕಟ್ಟು ಎದುರಾಗಲಿದೆ. ತಕ್ಷಣ ಈ ಆದೇಶವನ್ನು ಹಿಂಪಡೆಯುವಂತೆ ಸಂಪುಟ ಸಚಿವರು ಯೂನ್‌ ಸುಕ್‌ ಯೋಲ್‌ ಮೇಲೆ ಒತ್ತಡ ಹೇರಿದ್ದರು. ಇದೀಗ ಸುಕ್ ಯೋಲ್‌ ಅವರು ಸಚಿವರ ಒತ್ತಡಕ್ಕೆ ಮಣಿದಿದ್ದಾರೆ ಎಂದು ತಿಳಿದುಬಂದಿದೆ.


Spread the love

LEAVE A REPLY

Please enter your comment!
Please enter your name here