ಸಿನಿಮಾ ಇಂಡಸ್ಟ್ರಿಗೆ ಒಂದರ ಹಿಂದೊದರಂತೆ ಅಘಾತಗಳು ಸಂಭವಿಸುತ್ತಿರುತ್ತವೆ. ದಿನಕ್ಕೊಬ್ಬರು ನಟ-ನಟಿಯರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಅಂಥದ್ದೇ ದುರ್ಘಟನೆಯೊಂದು ಥಾಯ್ಲೆಂಡ್ ನಲ್ಲಿ ಸಂಭವಿಸಿದೆ.
ಸಮುದ್ರದ ತೀರದಲ್ಲಿನ ಬಂಡೆಗಳ ಮೇಲೆ ಕುಳಿತು ಪ್ರಾಣಾಯಾಮ ಸೇರಿದಂತೆ ಯೋಗಾಭ್ಯಾಸ ಮಾಡುತ್ತಿದ್ದ ಖ್ಯಾತ ನಟಿ ಕ್ಯಾಮಿಲ್ಲಾ ಬೆಲ್ಲಾಟಸ್ಕಾಯ ಭೀಕರ ಸಮುದ್ರದ ಅಲೆಗಳಿಗೆ ಬಲಿಯಾಗಿದ್ದಾರೆ. ನೋಡ ನೋಡುತ್ತಿದ್ದಂತೆ ಸಮುದ್ರದ ಅಲೆಗಳಿಂದ ನಟಿ ಪ್ರಾಣ ಕಳೆದುಕೊಂಡಿದ್ದಾರೆ.
ರಷ್ಯಾದ ಖ್ಯಾತ ನಟಿ ಕ್ಯಾಮಿಲ್ಲಾ ಬೆಲ್ಲಾಟಸ್ಕಾಯ ದಡದ ಮೇಲಿನ ಬಂಡೆಗಳ ಮೇಲೆ ಕುಳಿತು, ಪ್ರಾಣಾಯಾಮ ಮಾಡುತ್ತಿದ್ದರು. ಇದೇ ವೇಲೆ ಜೋರಗಿ ಅಪ್ಪಳಿಸಿದ ಅಲೆಗಳು ನಟಿಯತ್ತ ಬಂದಿದ್ವು, ನೋಡ ನೋಡುತ್ತಿದ್ದಂತೆ ಅಲೆಗಳು ತೇಲಿ ಬಂದ ರಭಸಕ್ಕೆ ನಟಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಥಾಯ್ಲೆಂಡ್‌ನ ಕೊಹ್ ಸಮುಯಿ ದ್ವೀಪದಲ್ಲಿ ಈ ಘಟನೆ ನಡೆದಿದೆ.
ನಟಿಯ ಕೊನೆಯ ಕ್ಷಣದ ವಿಡಿಯೋ ಸೆರೆಯಾಗಿದೆ. ಕಳೆದ ಕೆಲ ವರ್ಷಗಳಿಂದ ಕ್ಯಾಮಿಲ್ಲಾ ಯೋಗ ಮಾಡುತ್ತಿದ್ದಾರೆ. ಇದರಿಂದ ತನ್ನ ಜೀವನ ಸಂಪೂರ್ಣ ಬದಲಾಗಿರುವುದಾಗಿ ಕ್ಯಾಮಿಲ್ಲಾ ಹೇಳಿಕೊಂಡಿದ್ದರು. ರಷ್ಯಾ ನಟಿ ಕ್ಯಾಮಿಲ್ಲಾ ತನ್ನ ಬಾಯ್‌ಫ್ರೆಂಡ್ ಜೊತೆ ಸೇರಿ ಥಾಯ್ಲೆಂಡ್ ಪ್ರವಾಸದಲ್ಲಿರುವಾಗ ಈ ದುರ್ಘಟನೆ ನಡೆದಿದೆ.