ವಿಜಯಸಾಕ್ಷಿ ಸುದ್ದಿ, ಡಂಬಳ: ಐತಿಹಾಸಿಕ ಕೆರೆಗಳಿಗೆ ಈ ಭಾಗದ ಶಾಸಕರಾದ ಜಿ.ಎಸ್. ಪಾಟೀಲರು ಅಭಿವೃದ್ಧಿಯ ನೀಲನಕ್ಷೆ ತಯಾರಿಸಿದ್ದು, ಡಂಬಳ ಕೆರೆಯನ್ನು ಪ್ರವಾಸಿ ತಾಣ ಮಾಡಬೇಕು ಎಂದು ಕೇಳಿದ್ದಾರೆ. ಅದಕ್ಕೆ ಸೂಕ್ತವಾದ ಯೋಜನೆ ರೂಪಿಸುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲು ಮುಂದಾಗುತ್ತೇನೆ ಎಂದು ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.
ಡಂಬಳ ಗ್ರಾಮದ ಐತಿಹಾಸಿಕ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಯಲ್ಲಮ್ಮನಗುಡ್ಡ ಅಭಿವೃದ್ಧಿಗೆ ಕೇಂದ್ರ ಸರ್ಕಾರ 100 ಕೋಟಿ ರೂ ಹಣ ಬಿಡುಗಡೆ ಮಾಡಿದ್ದು, ಯಲ್ಲಮ್ಮನಗುಡ್ಡದ ಅಭಿವೃದ್ಧಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮುಂಡರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ ಮಾತನಾಡಿ, ರೈತರು, ಕಾರ್ಮಿಕರು ಪ್ರತಿಯೊಬ್ಬರೂ ಮುಖ್ಯವಾವಾನಿಗೆ ಬರಬೇಕು ಎನ್ನುವ ಹಿನ್ನೆಲೆಯಲ್ಲಿ ಈ ಭಾಗದ ರೈತರಿಗೆ ವರದಾನವಾಗುವಂತೆ ಕೆರೆಗಳನ್ನು ಭರ್ತಿಮಾಡಿದ ಶ್ರೇಯಸ್ಸು ಸಚಿವರಾದ ಎಚ್.ಕೆ. ಪಾಟೀಲರಿಗೆ ಮತ್ತು ಶಾಸಕರಾದ ಜಿ.ಎಸ್. ಪಾಟೀಲರಿಗೆ ಸಲ್ಲುತ್ತದೆ ಎಂದು ಹೇಳಿದರು.
ತಹಸೀಲ್ದಾರ ಎರಿಸ್ವಾಮಿ ಪಿ.ಎಸ್ ಮಾತನಾಡಿದರು. ಶಾಸಕ ಜಿ.ಎಸ್. ಪಾಟೀಲರಿಂದ ಕೃಷಿ ಇಲಾಖೆಯ ಮೂಲಕ ವಿವಿಧ ರಂಟೆ ಕುಂಟೆ, ಒಕ್ಕುವ ಯಂತ್ರ ವಿತರಣೆ ಜರುಗಿತು. ವಿವಿಧ ಇಲಾಖೆಗಳಿಂದ ನೂರಾರು ಫಲಾನುಭವಿಗಳಿಗೆ ಹಕ್ಕುಪತ್ರ, ಆದೇಶ ಪ್ರತಿಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಗ್ರಾ.ಪಂ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ, ಉಪಾಧ್ಯಕ್ಷೆ ಲಕ್ಷ್ಮವ್ವ ಕಾಶಭೋವಿ, ಶೋಭಾ ಮೇಟಿ, ಗೋಣಿಬಸಪ್ಪ ಕೊರ್ಲಹಳ್ಳಿ, ವಿ.ಎಸ್. ಯರಾಶಿ, ಬಸುರಡ್ಡಿ ಬಂಡಿಹಾಳ, ಬಾಬುಸಾಬ ಮೂಲಿಮನಿ, ಬಸುರಾಜ ಪೂಜಾರ, ಸೋಮಣ್ಣ ಗುಡ್ಡದ, ಶರಣು ಬಂಡಿಹಾಳ, ಪುಲಕೇಶಗೌಡ ಪಾಟೀಲ್, ಮರಿಯಪ್ಪ ಸಿದ್ಧಣ್ಣವರ, ಅಬ್ದುಲ್ ಕಲಕೇರಿ, ಜಾಕೀರ ಮೂಲಿಮನಿ, ಭೀಮಪ್ಪ ಗದಗಿನ, ಕುಮಾರಸ್ವಾಮಿ ಹಿರೇಮಠ, ಸುರೇಶ ಗಡಗಿ, ಕನಕಮೂರ್ತಿ ನರೇಗಲ್ಲ, ಅಶೋಕ ಹಡಪದ, ಮಳ್ಳಪ್ಪ ಒಂಟಲಭೋವಿ, ಮರಿತೇಮಪ್ಪ ಆದಮ್ಮನ್ನವರ, ಇಒ ವಿಶ್ವನಾಥ ಹೊಸಮನಿ, ಪಿಡಬ್ಲುಡಿ ನಾಗೇಂದ್ರ ಪಟ್ಟಣಶೆಟ್ಟರ, ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗ, ಪಕ್ಷದ ಕಾರ್ಯಕರ್ತರು ಇದ್ದರು.



