ದೊಡ್ಡಬಳ್ಳಾಪುರ: ಹಿಟ್ ಅಂಡ್ ರನ್ ಗೆ ತಾಯಿ ಸಾವನ್ನಪ್ಪಿ, ಮಗುವಿಗೆ ಗಂಭೀರ ಗಾಯಗಳಾಗಿರುವ ಘಟನೆ ದೊಡ್ಡಬಳ್ಳಾಪುರದ ನಂಧಿಮೋರಿ ಬಳಿ ನಡೆದಿದೆ. ಭಾನುಪ್ರಿಯ (25) ಮೃತ ದುರ್ದೈವಿಯಾಗಿದ್ದು, ಮನೋಜ್ (4) ಗಂಭೀರ ಗಾಯಗೊಂಡ ಮಗುವಾಗಿದೆ. ಶಾಲೆಯಿಂದ ಮಗುವನ್ನು ವಾಪಸ್ ಮನೆಗೆ ಕರೆದುಕೊಂಡು ಬರುವ ವೇಳೆ ದುರ್ಘಟನೆ ನಡೆದಿದೆ.
Advertisement
ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸಾವ್ರದಿಂದಾಗಿ ತಾಯಿ ಭಾನುಪ್ರಿಯ ಸಾವನ್ನಪ್ಪಿದ್ದಾರೆ. ಮಗುವಿನ ತಲೆಗೆ ಗಂಭೀರ ಗಾಯವಾಗಿದ್ದು, ಬೆಂಗಳೂರಿನ ಆಸ್ವತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ದೊಡ್ಡಬಳ್ಳಾಪುರ ಸರ್ಕಾರಿ ಆಸ್ವತ್ರೆಯ ಶವಾಗಾರಕ್ಕೆ ಮೃತ ದೇಹ ರವಾನಿಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.