ದಾವಣಗೆರೆ:- ತಂದೆ ಬೈಕ್ ಕೊಡಿಸದ ಹಿನ್ನೆಲೆ ಮಾನಸಿಕವಾಗಿ ಕುಗ್ಗಿದ್ದ ಮಗನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ್ಯಾಮತಿ ಪಟ್ಟಣದಲ್ಲಿ ಜರುಗಿದೆ.
20 ವರ್ಷದ ವಿಕಾಸ್.ಆರ್ ಆತ್ಮಹತ್ಯೆಗೆ ಶರಣಾದ ಯುವಕ. ಈತ ಹಲವು ದಿನಗಳಿಂದ ಬೈಕ್ ಕೊಡಿಸುವಂತೆ ತನ್ನ ತಂದೆಯ ಬಳಿ ಕೇಳಿದ್ದ. ಆದರೆ ಹಣದ ಸಮಸ್ಯೆಯಿಂದ ಪೋಷಕರಿಗೆ ಬೈಕ್ ಕೊಡಿಸಲು ಆಗಿರಲಿಲ್ಲ.
ಹೀಗಾಗಿ ಮಾನಸಿಕವಾಗಿ ಕುಗ್ಗಿದ್ದ ಆರೋಪಿಯು, ತಂದೆ ಮೇಲೆ ಸಣ್ಣ-ಪುಟ್ಟ ವಿಚಾರಕ್ಕೂ ಕೋಪ ಮಾಡಿಕೊಳ್ಳುತ್ತಿದ್ದ. ಮನೆಯವರ ಜೊತೆ ಮಾತನಾಡುವುದು ಮತ್ತು ಸರಿಯಾಗಿ ಊಟ ಮಾಡುವುದನ್ನು ಸಹ ಬಿಟ್ಟಿದ್ದ. ಮನೆ ತೊರೆದು ಒಂದು ವಾರದಿಂದ ಕುಂಕುವ ಗ್ರಾಮದ ಸಂಬಂಧಿಕರ ಮನೆಯಲಿದ್ದ. ಅಲ್ಲೇ ಆತ ವಿಷ ಸೇವಿಸಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



