ನವದೆಹಲಿ: HD ದೇವೇಗೌಡರ ಕುಟುಂಬವನ್ನು ನಿಂದಿಸುವ ಸಮಾವೇಶ ಮಾಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್ ಜನಕಲ್ಯಾಣ ಸಮಾವೇಶದ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು, ಯಾರ ಕಲ್ಯಾಣ ಆಗಿದೆ ಎಂದು ಕಾಂಗ್ರೆಸ್ ಸಮಾವೇಶ ಮಾಡಿದೆ? ಹೆಚ್‌ಡಿ ದೇವೇಗೌಡರ ಕುಟುಂಬವನ್ನು ನಿಂದಿಸುವ ಸಮಾವೇಶ ಮಾಡಿದ್ದಾರೆ.
ನಮ್ಮನ್ನು ನಿಂದಿಸಿ ರಾಜಕೀಯವಾಗಿ ದುರ್ಬಲ ಮಾಡುವ ಹುನ್ನಾರ ಮಾಡಿದ್ದಾರೆ. ದೇವೇಗೌಡರ ಕುಟುಂಬವನ್ನು ನಿಂದಿಸಿದರೆ ಏನು ಸಿಗುತ್ತೆ? ಅದಕ್ಕೆ ಪ್ರತಿಯಾಗಿ ಸಮಾವೇಶ ಮಾಡುವುದರಿಂದ ಏನು ಲಾಭ ಇಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಕುಮಾರಸ್ವಾಮಿ ಸಂಸತ್‌ನಲ್ಲಿ ಬ್ಯುಸಿಯಾಗಿರುವ ಹಿನ್ನೆಲೆ ಮಂಡ್ಯದಲ್ಲಿ ಮಾಡಬೇಕಿದ್ದ ಸಮಾವೇಶ ಮುಂದೂಡಿದೆ ಎಂದು ಹೇಳಿದರು. ಚನ್ನಪಟ್ಟಣಕ್ಕೆ ಹೆಚ್‌ಡಿ ಕುಮಾರಸ್ವಾಮಿ ಅವರು 1,200 ಕೋಟಿ ಅನುದಾನ ತಂದಿದ್ದಾರೆ. ಆದರೆ ನಾವು ಪ್ರಚಾರ ಪಡೆದಿಲ್ಲ. ಆತ್ಮ ಸಾಕ್ಷಿಯಾಗಿ ಕೆಲಸ ಮಾಡಿದ್ದೇವೆ ಎಂದು ಹೇಳಿದರು.