HomeKarnataka Newsಚಿಕ್ಕಮಗಳೂರು: 25 ನೇ ವರ್ಷದ ದತ್ತಜಯಂತಿ; ಜಿಲ್ಲಾಡಳಿತದಿಂದ ಹೈ ಅಲರ್ಟ್, 4000 ಪೊಲೀಸರ ನಿಯೋಜನೆ!

ಚಿಕ್ಕಮಗಳೂರು: 25 ನೇ ವರ್ಷದ ದತ್ತಜಯಂತಿ; ಜಿಲ್ಲಾಡಳಿತದಿಂದ ಹೈ ಅಲರ್ಟ್, 4000 ಪೊಲೀಸರ ನಿಯೋಜನೆ!

For Dai;y Updates Join Our whatsapp Group

Spread the love

ಚಿಕ್ಕಮಗಳೂರು:- 25 ನೇ ವರ್ಷದ ದತ್ತಜಯಂತಿ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

ಸುಗಮ ಆಚರಣೆಗೆ ಸುಮಾರು 4000 ಪೊಲೀಸರನ್ನು ನಿಯೋಜಿಸಲಾಗಿದ್ದು, ಪ್ರಮುಖ ಪ್ರದೇಶಗಳಲ್ಲಿ ಚೆಕ್ ಪೋಸ್ಟ್​ಗಳು ಹಾಗೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ವಿಹೆಚ್​ಪಿ, ಭಜರಂಗದಳ ನೇತೃತ್ವದಲ್ಲಿ ನಡೆಯುತ್ತಿರುವ 25ನೇ ವರ್ಷದ ದತ್ತಜಯಂತಿಗೆ ಚಿಕ್ಕಮಗಳೂರು ಜಿಲ್ಲಾಡಳಿತ ಸಕಲ‌ ಸಿದ್ದತೆ ನಡೆಸಿದೆ. ಡಿಸೆಂಬರ್ 6 ರಂದು ದತ್ತಮಾಲಾ ಧಾರಣೆ ಮೂಲಕ ಆರಂಭವಾಗಿರುವ ದತ್ತಜಯಂತಿ 14ರವರೆಗೂ ನಡೆಯಲಿದೆ. ಪ್ರಮುಖ ಕಾರ್ಯಕ್ರಮಗಳು 12 ರಿಂದ 14 ರ ವರೆಗೂ ನಡೆಯಲಿದ್ದು, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ.

ಇಂದಿನಿಂದ ಚಿಕ್ಕಮಗಳೂರು ಪೋಲಿಸ್ ಕಾವಲಿನಲ್ಲಿ ಇರಲಿದೆ. 7 ಎಸ್ಪಿಗಳ ನೇತೃತ್ವದಲ್ಲಿ 4000 ಪೊಲೀಸರ ನಿಯೋಜನೆ ಮಾಡಲಾಗಿದೆ. 27 ಮಂದಿ ಡಿವೈಎಸ್ಪಿ, 45 ಮಂದಿ ಇನ್ಸ್‌ಸ್ಪೆಕ್ಟರ್‌, 300 ಪೊಲೀಸ್‌ ಸಬ್‌ ಇನ್ಸ್‌ಸ್ಪೆಕ್ಟರ್‌, 500 ಮಂದಿ ಗೃಹ ರಕ್ಷಕದಳ ಸಿಬ್ಬಂದಿ, 20 ಕೆಎಸ್‌ಆರ್‌ಪಿ, 28 ಡಿಎಆರ್‌ ನಿಯೋಜನೆ ಮಾಡಲಾಗಿದೆ.

ಇದರ ಜತೆಗೆ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶದಲ್ಲಿರುವ ಸ್ಥಳೀಯರಲ್ಲಿ ಆತ್ಮಸ್ಥೈರ್ಯ ತುಂಬಲು ರೂಟ್‌ ಮಾರ್ಚ್‌ ನಡೆಸಲು ಆರ್‌ಐಎಫ್‌ ತುಕಡಿಯನ್ನು ನಿಯೋಜಿಸಲಾಗಿದೆ. ಇನ್ನೂ 61 ವಿಶೇಷ ಅಧಿಕಾರಿಗಳ ನೇಮಕ ಮಾಡಿದ್ದು, ಜಿಲ್ಲೆಯ ಗಡಿ ಭಾಗ ಸೇರಿದಂತೆ ಚಿಕ್ಕಮಗಳೂರು ನಗರದಲ್ಲಿ 36 ಚೆಕ್ ಪೋಸ್ಟ್, 400 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!