ಹಾಸನ: ಸಾಲಬಾಧೆ ತಾಳಲಾರದೇ ರೈತ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯ ಬಳಿಯ ಕಟ್ಟೆಗದ್ದೆ ಗ್ರಾಮದಲ್ಲಿ ನಡೆದಿದೆ. ನಟೇಶ್ (55) ಚಿನ್ನಮ್ಮ (45) ಆತ್ಮಹತ್ಯೆ ಮಾಡಿಕೊಂಡಿರೋ ರೈತ ದಂಪತಿಯಾಗಿದ್ದು, ಲಕ್ಷಾಂತರ ರೂಪಾಯಿ ಕೈ ಸಾಲ ಮಾಡಿಕೊಂಡಿದ್ದರು.
Advertisement
ಅದಲ್ಲದೆ ಬೆಳೆದಿದ್ದ ಬೆಳೆಯೂ ಆದಾಯ ತಂದುಕೊಂಡದೆ ದಂಪತಿ ಕಂಗಾಲಾಗಿದ್ದರು. ನಿನ್ನೆ ತಡರಾತ್ರಿ ಬಾವಿಗೆ ಹಾರಿ ಪತ್ನಿ ಚಿನ್ನಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿ ಪತಿಯೂ ಅದೇ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.