HomeGadag Newsಪಂಚಮಸಾಲಿ ಹೋರಾಟದ ವೇಳೆ ಹೈಡ್ರಾಮಾ: ಪೊಲೀಸರ ಜೊತೆ ವಾಗ್ವಾದ, ಸ್ವಲ್ಪದರಲ್ಲೇ ಪಾರಾದ ಪ್ರತಿಭಟನಾಕಾರರು

ಪಂಚಮಸಾಲಿ ಹೋರಾಟದ ವೇಳೆ ಹೈಡ್ರಾಮಾ: ಪೊಲೀಸರ ಜೊತೆ ವಾಗ್ವಾದ, ಸ್ವಲ್ಪದರಲ್ಲೇ ಪಾರಾದ ಪ್ರತಿಭಟನಾಕಾರರು

For Dai;y Updates Join Our whatsapp Group

ಗದಗ: ಪಂಚಮಸಾಲಿ 2ಎ ಮೀಸಲಾತಿಗಾಗಿ ಮಂಗಳವಾರ ಬೆಳಗಾವಿಯ ಸುವರ್ಣಸೌಧದ ಹೊರಗೆ ನಡೆದ ಪ್ರತಿಭಟನೆ ಹಿಂಸಾರೂಪ ತಾಳಿದ್ದಲ್ಲದೆ, ಲಾಠಿ ಚಾರ್ಜ್ ಕೂಡ ನಡೆದಿತ್ತು.ಘಟನೆ ವಿರುದ್ಧ ಇದೀಗ ಮತ್ತೊಂದು ಸುತ್ತಿನ ಪ್ರತಿಭಟನೆಗೆ ಪಂಚಮಸಾಲಿ 2A ಮೀಸಲಾತಿ ಹೋರಾಟಗಾರರು ರಾಜ್ಯಾದ್ಯಂತ ಮುಂದಾಗಿದ್ದಾರೆ.

ಗದಗನಲ್ಲಿ ಲಾಠಿ ಪ್ರಹಾರ ಖಂಡಿಸಿ ಗುರುವಾರ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ವೇಳೆ ಹೈಡ್ರಾಮಾ ನಡೆಯಿತು.ಪಂಚಮಸಾಲಿ ಸಮಾಜದವರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರತಿಭಟನಾಕಾರರು ಟೈರ್ ಗೆ ಬೆಂಕಿ ಹಚ್ಚಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗದಗ ನಗರದ ಹಳೇ ಡಿಸಿ ಸರ್ಕಲ್ ಬಳಿ ಪ್ರತಿಭಟನೆ ತೀವ್ರಗೊಂಡಿದ್ದು, ಸರ್ಕಲ್ ಬಂದ್ ಮಾಡಿ ‌ಹೋರಾಟ ಮಾಡುತ್ತಿದ್ದರು. ಹೋರಾಟದ ವೇಳೆ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಲು ಮುಂದಾಗಿದ್ದರು. ಈ ವೇಳೆ ಟೈರ್ ಗೆ ಹೊತ್ತಿದ್ದ ಬೆಂಕಿ ಆರಿಸಲು ಪೊಲೀಸರು ಮುಂದಾಗುತ್ತಿದ್ದಂತೆ ಪಂಚಮಸಾಲಿ ಮುಖಂಡರು ಅಡ್ಡಿಪಡಿಸಿದ್ದಾರೆ.

ಪೊಲೀಸರ ಜೊತೆಗೆ ವಾಗ್ವಾದ, ತಳ್ಳಾಟ ನಡೆದಿದ್ದು, ಬೆಂಕಿ ನಂದಿಸಲು ಪ್ರತಿಭಟನೆಕಾರರು ಬಿಡದ ಕಾರಣ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಬೆಂಕಿ ಆರಿಸುವ ವೇಳೆ ಇಬ್ಬರು ಪ್ರತಿಭಟನಾಕಾರರಿಗೆ ಬೆಂಕಿ ತಗುಲಿ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img