ಅಂಡರ್‌ವೇರ್‌ನಿಂದ ಆತ್ಮಹತ್ಯೆಗೆ ಯತ್ನಿಸಿದ ದಕ್ಷಿಣ ಕೊರಿಯಾ ಮಾಜಿ ರಕ್ಷಣಾ ಸಚಿವ ಕಿಮ್ ಯೋಂಗ್ ಹ್ಯುನ್

0
Spread the love

ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಕಳೆದ ಕೆಲ ದಿನಗಳಿಂದ ಮಿಲಿಟರಿ ಆಡಳಿತ ಸಾಕಷ್ಟು ಸದ್ದು ಮಾಡುತ್ತಿದೆ. ಕಾನೂನು ಜಾರಿಗೊಂಡ ಕೆಲವೇ ಗಂಟೆಗಳಲ್ಲಿ ಅದನ್ನು ಹಿಂಪಡೆಯಲಾಗಿತ್ತಾದರೂ ಅದು ಮತ್ತೆ ಮತ್ತೆ ಸುದ್ದಿ ಮಾಡುತ್ತಲೇ ಇದೆ. ಇದೀಗ ಈ ಕಾನೂನಿನ ಮಾಸ್ಟರ್‌ಮೈಂಡ್‌ ಆಗಿದ್ದ ಮಾಜಿ ರಕ್ಷಣಾ ಸಚಿವ ಕಿಮ್ ಯೋಂಗ್ ಹ್ಯುನ್ ಅವರು ಪೊಲೀಸ್​ ಕಸ್ಟಡಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದು ಸದ್ಯ ಯಾವುದೇ ಸಮಸ್ಯೆ ಇಲ್ಲದೆ ಪರಾಗಿದ್ದಾರೆ

Advertisement

ಕಿಮ್ ಯೋಂಗ್ ಹ್ಯುನ್ ಶೌಚಾಲಯದಲ್ಲಿ ತಮ್ಮ ಒಳ ಉಡುಪು ಬಳಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.  ಸಿಯೋಲ್‌ನ ಬಂಧನ ಕೇಂದ್ರದಲ್ಲಿ ಕಿಮ್ ಆತ್ಮಹತ್ಯೆಗೆ ಯತ್ನಿಸಿದರು. ಆದರೆ ಅವರನ್ನು ರಕ್ಷಿಸಲಾಗಿದ್ದು ಈಗ ಅವರು ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಕೊರಿಯಾ ತಿದ್ದುಪಡಿ ಸೇವಾ ಆಯುಕ್ತ ಜನರಲ್ ಶಿನ್ ಯೋಂಗ್ ಹೈ ತಿಳಿಸಿದರು.

ಸಿಯೋಲ್‌ನ ಬಂಧನ ಕೇಂದ್ರದಲ್ಲಿ ಕಿಮ್ ಆತ್ಮಹತ್ಯೆಗೆ ಯತ್ನಿಸಿದರು. ಆದರೆ ಅವರನ್ನು ರಕ್ಷಿಸಲಾಗಿದ್ದು ಈಗ ಅವರು ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಕೊರಿಯಾ ತಿದ್ದುಪಡಿ ಸೇವಾ ಆಯುಕ್ತ ಜನರಲ್ ಶಿನ್ ಯೋಂಗ್ ಹೈ ತಿಳಿಸಿದರು.

ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸಿಯೋಲ್ ನ್ಯಾಯಾಲಯವು ಕಿಮ್ ವಿರುದ್ಧ ವಾರಂಟ್ ಹೊರಡಿಸಿದ ನಂತರ ಬುಧವಾರ ಅವರನ್ನು ಬಂಧಿಸಲಾಯಿತು. ಡಿಸೆಂಬರ್ 3ರಂದು ತುರ್ತು ಮಿಲಿಟರಿ ಆಡಳಿತಕ್ಕೆ ಆದೇಶ ನೀಡಿದ ನಂತರ ಬಂಧಿಸಲಾದ ಮೊದಲ ವ್ಯಕ್ತಿ ಕಿಮ್ ಆಗಿದ್ದಾರೆ.

ಅಧ್ಯಕ್ಷ ಯೂನ್ ಸುಕ್ ಯೋಲ್ ಅವರ ಮಿಲಿಟರಿ ಆಡಳಿತ ಘೋಷಣೆಗೆ ಸಂಬಂಧಿಸಿದ ಬಂಡಾಯದ ಆರೋಪಗಳ ಮೇಲೆ ಕಿಮ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದು ತನಿಖೆ ನಡೆಸಲಾಗುತ್ತಿದೆ. ವರದಿಯೊಂದರ ಪ್ರಕಾರ ಸೇನಾ ಆಡಳಿತ ಹೇರುವಲ್ಲಿ ನಿರ್ಣಾಯಕ ಕರ್ತವ್ಯಗಳಲ್ಲಿ ತೊಡಗಿದ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕಿಮ್ ಅವರನ್ನು ಬಂಧಿಸಲಾಗಿದೆ.

ಸಂಸತ್ತಿನ ವಿಚಾರಣೆಯ ಸಂದರ್ಭದಲ್ಲಿ ರಕ್ಷಣಾ ಸಚಿವ ಕಿಮ್‌ ಅವರು ತಮ್ಮ ಬಂಧನಕ್ಕೂ ಮೊದಲು ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದು, ನನಗೆ ಜೀವ ಬೆದರಿಕೆ ಹಾಕಿದ್ದರು ಎಂದು ಕೊರಿಯಾ ತಿದ್ದುಪಡಿ ಸೇವೆಯ ಕಮಿಷನರ್ ಜನರಲ್ ಅರೋಪಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here