ಬೆಳಗಾವಿ: ಗೃಹಲಕ್ಷ್ಮಿ ಯೋಜನೆ ದೇವದಾಸಿಯರಿಗೆ ಕೊಡಲಾಗ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ದೇವದಾಸಿಯರಿಗೆ ಸರಿಯಾಗಿ ಮಾಶಾಸನ ಡಿಬಿಟಿ ಮೂಲಕ ಹಾಕಲಾಗ್ತಿದೆ.ಎಲ್ಲೂ ಕೂಡಾ ಮಾಶಾಸನ ಸೋರಿಕೆ ಆಗ್ತಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿಯರ ಸರ್ವೆ ಸರಿಯಾಗಿ ಆಗಿಲ್ಲ ಅನ್ನೋ ಬಗ್ಗೆ ಮತ್ತೊಮ್ಮೆ ಸಮೀಕ್ಷೆ ಮಾಡುತ್ತೇವೆ ಎಂದರು.
ಇನ್ನೂ ದೇವದಾಸಿಯರಿಗೆ 2 ಸಾವಿರ ರೂ. ಮಾಶಾಸನ ಕೊಡಲಾಗುತ್ತಿದೆ. ಪ್ರತಿ ವರ್ಷ 250 ದೇವದಾಸಿಯರಿಗೆ ಒಂದು ಸಾರಿಗೆ ಪ್ರೊತ್ಸಾಹ ಧನವಾಗಿ 30 ಸಾವಿರ ನೀಡಲಾಗುತ್ತದೆ. ಈ ಹಣ ವಾಪಸ್ ಕೊಡುವ ಹಾಕಿಲ್ಲ.ದೇವದಾಸಿಯರಿಗೆ ಆರೋಗ್ಯ ತಪಾಸಣೆ ಮಾಡೋ ಕೆಲಸ ಆಗ್ತಿದೆ.ಮನೆಗಳು ಕೊಡೋ ಬಗ್ಗೆ ನಾವು ಪಟ್ಟಿ ಮಾಡಿ ವಸತಿ ಇಲಾಖೆಗೆ ಕಳಿಸುತ್ತೇವೆ.
ಅವರು ಅಂತಿಮ ನಿರ್ಧಾರ ಮಾಡಬೇಕು.ಯಾರು ಅರ್ಜಿ ಹಾಕಿರುತ್ತಾರೋ ಅವರಿಗೆ ಆದ್ಯತೆ ಮೇರೆಗೆ ಮನೆ ಹಂಚಿಕೆ ಮಾಡುತ್ತದೆ.ಗೃಹಲಕ್ಷ್ಮಿ ಯೋಜನೆ ದೇವದಾಸಿಯರಿಗೆ ಕೊಡಲಾಗ್ತಿದೆ. ಯಾರಿಗಾದರೂ ಸಿಗದೇ ಇದ್ದರೆ ಮಾಹಿತಿ ಕೊಟ್ಟರೆ ಅವರಿಗೆ ಗೃಹಲಕ್ಷ್ಮಿ ಯೋಜನೆ ಕೊಡುತ್ತೇವೆ ಎಂದು ತಿಳಿಸಿದರು.