ಬಿಗ್ ಬಾಸ್ ಸೀಸನ್ 11 ಕಳೆದ ಎರಡ್ಮೂರು ವಾರಗಳಿಂದ ಬರೀ ಜಗಳಗಲ್ಲೇ ಸ್ಪರ್ಧಿಗಳು ಕಿತ್ತಾಡಿಕೊಳ್ಳುತ್ತಿದ್ದಾರೆ.
ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಯಲ್ಲಿ ಅಬ್ಬರ ತೋರುತ್ತಿರುವ ರಜತ್ ಆಟಕ್ಕೆ ವೀಕ್ಷಕರು ಕೂಡ ಫಿದಾ ಆಗಿದ್ದಾರೆ. ಮಾತಿಗೂ ಸೈ, ಆಟಕ್ಕೂ ಸೈ ಎಂಬಂತೆ ರಜತ್ ತಮ್ಮ ಸಾಮಾರ್ಥ್ಯ ತೋರಿದ್ದಾರೆ.
ಇನ್ನೂ ಇದೀಗ ಸ್ಪರ್ಧಿ ರಜತ್ ಅವರ ಮಾತಿಗೆ ಮನೆಮಂದಿಯೇ ರೊಚ್ಚಿಗೆದ್ದಿದ್ದಾರೆ. ಹದ್ದು ಮೀರಿದೆ ವರ್ತನೆ ಕಂಡು ಸ್ಪರ್ಧಿಗಳು ದಂಗಾಗಿದ್ದಾರೆ. ಉಗ್ರಂ ಮಂಜು ಹಾಗೂ ರಜತ್ ನಡುವೆ ಜೋರು ಗಲಾಟೆ ನಡೆದಿದೆ.
‘ಚೆಂಡು ಸಾಗಲಿ ಮುಂದೆ ಹೋಗಲಿ’ ಎನ್ನುವ ಟಾಸ್ಕ್‌ನಲ್ಲಿ ಬಿಗ್ ಬಾಸ್ ಚೈತ್ರಾ ಅವರು ಆಟದ ಉಸ್ತುವಾರಿ ವಹಿಸಿಕೊಂಡಿದ್ದರು. ಈ ವೇಳೆ, ಚೈತ್ರಾ ಹಾಗೂ ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ. ಟಿವಿಯಲ್ಲಿ ಗೇಮ್ ನೋಡಿಕೊಂಡು ಬಂದವರ ಕಥೆ ಇದೆ ಎಂದು ರಜತ್ ಬಗ್ಗೆ ಮಂಜು ಕೆಂಡಕಾರಿದ್ದಾರೆ. ಆಗ ಯೋಗ್ಯತೆಯ ಮಾತುಗಳು ಬಂದಿವೆ. ಮಂಜು ಅವರು ರಜತ್ ಅವರ ಮೈ ಮೇಲೆ ಹೋಗಿದ್ದಾರೆ.
ಕಳೆದ ವಾರಾಂತ್ಯ ಧನರಾಜ್ ಜೊತೆಗಿನ ರಜತ್ ಜಗಳದ ವಿಚಾರವಾಗಿ ಸುದೀಪ್ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಜೊತೆಗೆ ಶಿಕ್ಷೆ ನೀಡಿದ್ದರು. ಆದರೂ ಇದೀಗ ಮತ್ತೆ ಮಂಜು ಹಾಗೂ ರಜತ್ ಅವರ ನಡುವೆ ಮಾರಾಮಾರಿಯಾಗಿದೆ.