ಮಂಡ್ಯ: ವಿವಾಹಿತ ಜೋಡಿಯ ಪ್ರೇಮ ಪ್ರಕರಣ ಬಹಿರಂಗಗೊಂಡ ಹಿನ್ನೆಲೆಯಲ್ಲಿ ವಿವಾಹಿತ ಜೋಡಿಯು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ಜರುಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಕೆ.ಬೆಳ್ಳೂರಿನ ಸೃಷ್ಟಿ,ಹಾಗು ಬನ್ನಹಳ್ಳಿಯ ಪ್ರಸನ್ನ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಬ್ಬರ ಪ್ರೀತಿ ಬಹಿರಂಗ ಹಿನ್ನಲೆ ಅತ್ತ ಸೃಷ್ಟಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೆ, ಇತ್ತ ಪ್ರಿಯಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಮೂಲಕ ಪ್ರೇಮ ಪುರಾಣಕ್ಕೆ ಇಬ್ಬರು ವಿವಾಹಿತ ಪ್ರೇಮಿಗಳು ದುರಂತ ಅಂತ್ಯ ಕಂಡಿದ್ದಾರೆ.
ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



