ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನ ಹರ್ತಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹಾಲಮ್ಮ ಕುರಿ ಅವರನ್ನು ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ತೋಟಪ್ಪ (ರಾಜು) ಕುರಡಗಿ ಅವರ ಸಮ್ಮುಖದಲ್ಲಿ ಕಣವಿ ಗ್ರಾಮದ ಬೀರದೇವರ ದೇವಸ್ಥಾನದ ಬಳಿ ಸನ್ಮಾನಿಸಿ, ಗೌರವಿಸಲಾಯಿತು.
Advertisement
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಮೇಶ ಎನ್.ಸಜ್ಜಗಾರ, ಬಸವಣ್ಣೆಪ್ಪ ಚಿಂಚಲಿ, ಬೂದಪ್ಪ ಹಳ್ಳಿ, ಗ್ರಾ.ಪಂ ಉಪಾಧ್ಯಕ್ಷರಾದ ರೇಣವ್ವ ತಳವಾರ, ಸದಸ್ಯರಾದ ಸೋಮಣ್ಣ ನಡುರ, ಪ್ರಕಾಶ ಕುರ್ತಕೋಟಿ, ಪಾರ್ವತವ್ವ ಕುರ್ತಕೋಟಿ, ಗಂಗಾಧರ ಗಡಾದ, ಯಲ್ಲಪ್ಪ ತಿಪ್ಪಣ್ಣವರ, ಪರಪ್ಪ ಮಾಯಣ್ಣವರ, ಬೀರಪ್ಪ ಉಪ್ಪಾರ, ರಾಮಣ್ಣ ತೋಳನವರ, ಗ್ರಾಮೀಣ ಮುಖಂಡ ರವಿ ವಗ್ಗನವರ, ಮುತ್ತಪ್ಪ ಮೂಲಿಮನಿ, ಸಿದ್ದಪ್ಪ ಜೊಂಡಿ, ಸುನೀಲ ಕುರ್ತಕೋಟಿ, ಸೋಮಣ್ಣ ಕೋರಿ, ಮಂಜು ಕುರಿ, ಕೃಷ್ಣ ನಾಗಲೂಟಿಮಠ, ಯಲ್ಲಪ್ಪ ಕೋರಿ ಮುಂತಾದವರು ಉಪಸ್ಥಿತರಿದ್ದು ಶುಭ ಕೋರಿದರು.