ಬೆಂಗಳೂರು: ಕೇಸರಿ ಶಾಲು ಹಾಕಿದ ತಕ್ಷಣ ದುಶ್ಯಾಸನರು ಯುಧಿಷ್ಠಿರ ಆಗೋದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸದನದಲ್ಲಿ ಒಬ್ಬ ಮಹಿಳೆಗೆ ಅವರು ಮಾತನಾಡಿದ್ದಾರೆ. ಬಿಜೆಪಿ ಅವರು ಏನೂ ಆಗೇ ಇಲ್ಲ ಅಂತಾರೆ. ಮಾಧ್ಯಮದಲ್ಲಿ ಬಂದ ವಿಡಿಯೋ ಕಾಂಗ್ರೆಸ್ ನವರು ಬಿಟ್ಟಿದ್ದು ಅಂತಾರೆ.
Advertisement
ಪಾಕಿಸ್ತಾನ ಯುದ್ಧ ಗೆದ್ದ ರೀತಿ ಆಡ್ತಾ ಇದ್ದಾರೆ. ಅವರಲ್ಲಿ ಒಬ್ಬರಿಗೊಬ್ಬರಿಗೆ ಹೊಂದಾಣಿಕೆನೇ ಇಲ್ಲ. ವಿಡಿಯೋ ಎಫ್ ಎಸ್ ಎಲ್ ಗೆ ಹೋಗಿದೆ, ಎಲ್ಲಾ ರಿಪೋರ್ಟ್ ಬರಲಿ ಗೊತ್ತಾಗುತ್ತೆ. ಸಿಐಡಿ ಗೆ ಕೊಟ್ಟಿದ್ದಾರೆ, ಸತ್ಯಾಂಶ ಬರಲಿ ಬಿಡಿ ಎಂದು ಹೇಳಿದ್ದಾರೆ.
ಇನ್ನೂ ಕಾಂಗ್ರೆಸ್ ಅಧಿವೇಶನದ ಸಮಯದಲ್ಲಿ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಮೊದಲು ಬಿಎಸ್ ವೈ ಮನೆ ಮುಂದೆ ಪ್ರತಿಭಟನೆ ಮಾಡಲಿ ಎಂದು ಟಾಂಗ್ ಕೊಟ್ಟಿದ್ದಾರೆ.