ಕಳೆದೆರಡು ದಿನಗಳಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಎಮೋಷನಲ್ ಆಗಿ ಬಿಟ್ಟಿದೆ. ಇನ್ನೇನು ಫಿನಾಲೆ ಹತ್ತಿರ ಬರುತ್ತಿದ್ದಂತೆ ಮನೆಯೊಳಗೆ ಉಳಿದುಕೊಂಡಿರುವ ಸ್ಪರ್ಧಿಗಳು ವೀಕ್ಷಕರಿಗೆ ಇಷ್ಟ ಆಗುವುದಕ್ಕೆ ಶುರುವಾಗಿದ್ದಾರೆ. ಆರಂಭದಲ್ಲಿ ವೀಕ್ಷಕರಿಗೆ ಇಷ್ಟ ಆದ ಸ್ಪರ್ಧಿಗಳು ಈಗ ಇಷ್ಟ ಆಗುತ್ತಿಲ್ಲ. ಇಷ್ಟ ಆಗದವರು ಈಗ ಇಷ್ಟ ಆಗುತ್ತಿದ್ದಾರೆ.
ಅಂತಹವರಲ್ಲಿ ಗೌತಮಿ ಜಾಧವ್ ಕೂಡ ಒಬ್ಬರು. ಎಸ್, ಇಂದು ಬಿಗ್ಬಾಸ್ ಮನೆಗೆ ಗೌತಮಿ ಜಾಧವ್ ಪತಿಯ ಆಗಮನವಾಗಿದೆ. ಪತಿಯನ್ನು ನೋಡಿದ ಕೂಡಲೇ ಗೌತಮಿ ಜಾಧವ್ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.
93 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿದ್ದ ಗೌತಮಿ ಜಾಧವ್ ಮುಖದಲ್ಲಿ ಮಂದಹಾಸ ಮೂಡಿದೆ. ಇಷ್ಟು ದಿನ ಕುಟುಂಬಸ್ಥರನ್ನು ಬಿಟ್ಟು ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದ ಗೌತಮಿ ಈಗ ಸಖತ್ ಹ್ಯಾಪಿಯಾಗಿದ್ದಾರೆ.
ಅದರಲ್ಲೂ ನಿನ್ನೆ ಗೌತಮಿ ಜಾಧವ್ ಅವರ ವಿವಾಹ ವಾರ್ಷಿಕೋತ್ಸವ ಇತ್ತು. ಹೀಗಾಗಿ ವಿವಾಹ ವಾರ್ಷಿಕೋತ್ಸವದ ದಿನವೇ ಬಿಗ್ಗಾಸ್ ಗೌತಮಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಅಲ್ಲದೇ ಪತಿಯಿಂದಲೂ ಗೌತಮಿ ಅವರಿಗೆ ಸರ್ಪ್ರೈಸ್ ಗಿಫ್ಟ್ ಸಿಕ್ಕಿದೆ.
ಬಿಗ್ಬಾಸ್ ಮನೆಗೆ ಬಂದ ಪತಿ ವಿಶೇಷವಾದ ಗಿಫ್ಟ್ ಅನ್ನು ಪತ್ನಿಗೆ ಕೊಟ್ಟಿದ್ದಾರೆ. ಕಾಲಿಗೆ ಗೆಜ್ಜೆ ಹಾಗೂ ಕತ್ತಿಗೆ ಸರ ಹಾಕಿ ಸರ್ಪ್ರೈಸ್ ಕೊಟ್ಟಿದ್ದಾರೆ. ಇದಾದ ಬಳಿಕ ಗೌತಮಿ ಬಿಗ್ಬಾಸ್ ಬಾಸ್ಗೆ ಧನ್ಯವಾದ ತಿಳಿಸಿದ್ದಾರೆ.
ಇನ್ನೂ, ಪ್ರೀತಿಸಿ ಮದುವೆಯಾಗಿರೋ ಗೌತಮಿ ಹಾಗೂ ಅಭಿಷೇಕ್ ಬಿಗ್ಬಾಸ್ ಮನೆಯಲ್ಲೇ ಆರನೇ ವರ್ಷದ ಆ್ಯನಿವರ್ಸರಿ ಆಚರಿಸಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ಬಿಗ್ಬಾಸ್ ಮನೆಯಲ್ಲೇ ಕೇಕ್ ಮಾಡಿ ಗೌತಮಿ ಹಾಗೂ ಅಭಿಷೇಕ್ ಸಂಭ್ರಮಿಸಿದ್ದಾರೆ.