ಕೊಪ್ಪಳ: ಗ್ಯಾರಂಟಿ ಯೋಜನೆಗಳಿಂದಾಗಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿರುವುದು ಸುಳ್ಳು ಆರೋಪ ಎಂದು ಸಚಿವ ಎನ್.ಎಸ್ ಬೋಸರಾಜು ಹೇಳಿದ್ದಾರೆ. ನಗರದಲ್ಲಿ ಬಸ್ ದರ ಹೆಚ್ಚಳ ವಿಚಾರವಾಗಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದಾಗಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿರುವುದು ಸುಳ್ಳು ಆರೋಪ. ಗ್ಯಾರಂಟಿ ಯೋಜನೆಗಳಿಗೆ ಕೂಡಾ ಜನರ ತೆರಿಗೆ ಹಣವನ್ನೇ ನಾವು ಕೊಡುತ್ತಿದ್ದೇವೆ ಎಂದರು.
ಇನ್ನೂ ಕಳ್ಳತನ ಮಾಡಿ ಹಣ ಕೊಡೋಕೆ ಆಗುತ್ತಾ? ಡೀಸೆಲ್ ಬೆಲೆ ಹೆಚ್ಚಳವಾಗಿದೆ, ಖರ್ಚು ವೆಚ್ಚ ಹೆಚ್ಚಾಗಿದೆ. ಹೀಗಾಗಿ ಬಸ್ ದರ ಹೆಚ್ಚಳ ಮಾಡುತ್ತಿದ್ದಾರೆ ಎಂದು ಹೇಳಿದರು. ಸಂಪುಟ ಪುನಾರಚನೆ ವಿಚಾರವಾಗಿ, ಖಾಲಿ ಇರುವ ಹುದ್ದೆ ಮಾತ್ರ ಭರ್ತಿ ಎಂದು ಸಿಎಂ ಹೇಳಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಬಗ್ಗೆ ಅಪಾರ್ಥ ಕಲ್ಪಿಸೋದು ಬೇಡ. ನಿನ್ನೆ ಕ್ಯಾಬಿನೆಟ್ ನಂತರ ಎಲ್ಲರನ್ನು ಊಟಕ್ಕೆ ಕರೆದಿದ್ದರು. ಬೆಂಗಳೂರಿನಲ್ಲಿ ಇದ್ದವರು ಊಟ ಮಾಡಿ ಬಂದಿದ್ದಾರೆ ಎಂದರು.