Homehubballiನೌಕರರಿಗೆ ಅಪಘಾತ ಪರಿಹಾರ ವಿಮೆ ಜಾರಿ

ನೌಕರರಿಗೆ ಅಪಘಾತ ಪರಿಹಾರ ವಿಮೆ ಜಾರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ವಾ.ಕ.ರ.ಸಾ ಸಂಸ್ಥೆಯ ನಗರ ಸಾರಿಗೆ ಘಟಕ ಹುಬ್ಬಳ್ಳಿಯಲ್ಲಿ ಸೋಮವಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದ ಉದ್ಘಾಟನೆ ಹಾಗೂ ಎಸ್‌ಬಿಐ ಬ್ಯಾಂಕ್‌ನಿAದ ಒಂದು ಕೋಟಿ ಪರಿಹಾರ ವಿಮೆ ಜಾರಿ ಯೋಜನೆಯನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ಕಾಗವಾಡ ಶಾಸಕರಾದ ಭರಮಗೌಡ (ರಾಜು) ಅ.ಕಾಗೆ ಅವರು ನೆರವೇರಿಸಿ ಮಾತನಾಡಿ, ಎಸ್‌ಬಿಐ ಬ್ಯಾಂಕ್‌ನಿಂದ ಒಂದು ಕೋಟಿ ಅಪಘಾತ ಪರಿಹಾರ ವಿಮೆ ಜಾರಿಯಾಗಿದೆ. ಹೆಚ್ಚು ಶ್ರಮ ಪಡುವ ಸಾರಿಗೆ ನೌಕರರು ಅನಿರೀಕ್ಷಿತವಾಗಿ ನಿಧನರಾದಲ್ಲಿ, ಅವರುಗಳ ಅವಲಂಬಿತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಬಾರದು ಎಂಬ ಸದುದ್ದೇಶದಿಂದ ಮತ್ತು ನೌಕರರ ಅವಲಂಬಿತರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಈ ಯೋಜನೆಯನ್ನು ತರಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ಕುಟುಂಬ ಕಲ್ಯಾಣ ನಿಧಿ ಹಾಗೂ ಅಪಘಾತ ಪರಿಹಾರ ನಿಧಿ ಚೆಕ್‌ಗಳನ್ನು ವಿತರಿಸಿದರು.

ರೀಜನಲ್ ಮ್ಯಾನೇಜರ್ ಡಾ. ಮೋಹನ ಪಾಟೀಲ ಮಾತನಾಡಿ, ಎಸ್‌ಬಿಐ ಬ್ಯಾಂಕಿನ ಈ ಯೋಜನೆಯ ಮೂಲಕ ಸಂಸ್ಥೆಯ ನೌಕರರಿಗೆ ನೀಡುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಡಾ. ನಿರಂಜನ್ ಜೋಶಿ, ಎಂ.ಎA.ಜೋಶಿ ಕಣ್ಣಿನ ಆಸ್ಪತ್ರೆ ನಿರ್ದೇಶಕ ಡಾ. ಎಸ್.ಎಂ. ಜೋಶಿ ಮಾತನಾಡಿದರು.

ಸಮಾರಂಭದಲ್ಲಿ ಇಲಾಖಾ ಮುಖ್ಯಸ್ಥರಾದ ವಿಜಯಶ್ರೀ ನರಗುಂದ, ಗಣೇಶ ರಾಠೋಡ, ಬಿ.ಬೋರಯ್ಯ, ಜಗದಂಬಾ ಕೋಪರ್ಡೆ, ಜಿ.ಶ್ರೀನಾಥ, ಅಧಿಕಾರಿಗಳಾದ ಎಂ.ಬಿ. ಕಪಲಿ, ರವಿ ಅಂಚಿಗಾವಿ, ಪಿ.ಆರ್. ಕಿರಣಗಿ, ಶಿವಾನಂದ ನಾಗಾವಿ, ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಸಿದ್ಧಲಿAಗೇಶ, ಎಚ್.ರಾಮನಗೌಡರ, ಕಾರ್ಮಿಕ ಮುಖಂಡರುಗಳಾದ ಆರ್.ಎಫ್. ಕವಳಿಕಾಯಿ, ಗಂಗಾಧರ ಕಮಲದಿನ್ನಿ ಮತ್ತು ಸಂಸ್ಥೆಯ ಇನ್ನಿತರ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪಿ.ವೈ. ನಾಯಕ ಸ್ವಾಗತಿಸಿದರು. ಸುನಿಲ ಪತ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಮಾತನಾಡಿ, 2025ರಲ್ಲಿ ಸಂಸ್ಥೆಯ ನೌಕರರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಅದರಲ್ಲಿ ಮೊದಲನೆಯದಾಗಿ ಎಸ್‌ಬಿಐ ಬ್ಯಾಂಕಿನಿಂದ ಒಂದು ಕೋಟಿ ಅಪಘಾತ ಪರಿಹಾರ ವಿಮೆ ಜಾರಿಯಾಗಿದೆ. ಸಂಸ್ಥೆಯ ನೌಕರರ ಅನುಕೂಲಕ್ಕಾಗಿ ತಮ್ಮ ಸಮಸ್ಯೆಗಳ ಕುರಿತು ಕಛೇರಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ವಾಯವ್ಯ ಸ್ನೇಹಿ ಆ್ಯಪ್‌ನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಸಿಬ್ಬಂದಿಗಳು ಪಿಎಫ್ ಮಾಹಿತಿ ಇ-ಅರ್ಜಿ ಸಲ್ಲಿಕೆ, ಸಾರಿಗೆ ಸ್ಪಂದನದಡಿ ದೂರು/ಮನವಿ ಸಲ್ಲಿಕೆ ಮುಂತಾದ ಸೌಲಭ್ಯಗಳಿದ್ದು, ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!