ಬೆಂಗಳೂರು ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಾಹನ ಸವಾರರು ಪೊಲೀಸರಿಗೆ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಡಿಸೆಂಬರ್ 28ರಂದು ಕೋರಮಂಗಲ ಬಳಿ ಯುವಕರ ಗುಂಪು ಕಾರಿನ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
Advertisement
ಕ್ಯಾಬ್ನ್ನು ಫಾಲೋ ಮಾಡಿಕೊಂಡು ಬಂದ ಪುಂಡ ಯುವಕರ ಗುಂಪು ಕಾರಿನ ಬ್ಯಾನೆಟ್ ಮೇಲೆ ಹತ್ತಿ ಏಕಾಏಕಿ ಹಲ್ಲೆಗೆ ಯತ್ನಿಸಿದ್ದಾರೆ. ಯುವಕರ ಪುಂಡಾಟದಿಂದ ಕಾರಿಗೆ ಡ್ಯಾಮೇಜ್ ಆಗಿರುವುದು ಕಂಡು ಬಂದಿದೆ. ಸಿಗ್ನಲ್‌ನಲ್ಲಿ ಕಾರು ಅಡ್ಡಗಟ್ಟಿ ಇಬ್ಬರ ಪೈಕಿ ಓರ್ವ ಕಾರು ಚಾಲಕನನ್ನ ಕೆಳಗಿಳಿಯುವಂತೆ ಒತ್ತಾಯಿಸಿದ್ದಾನೆ.
ಮತ್ತೋರ್ವ ನೋಡನೋಡುತ್ತಿದ್ದಂತೆ ಕಾರಿನ ಬಾನೆಟ್ ಮೇಲೇರಿ ವಿಂಡ್ ಶೀಲ್ಡ್‌ಗೆ ಕಾಲಿನಿಂದ ಒದ್ದು ಆಕ್ರೋಶ ಹೊರಹಾಕಿದ್ದಾನೆ. ಘಟನೆಯ ಸಂಪೂರ್ಣ ವಿಡಿಯೋ ಮತ್ತೊಂದು ಕಾರಿನ ಡ್ಯಾಶ್ ಬೋರ್ಡ್ನಲ್ಲಿ ರೆಕಾರ್ಡ್ ಆಗಿದೆ.