ವಿಜಯಸಾಕ್ಷಿ ಸುದ್ದಿ, ಗದಗ: ಬೆಟಗೇರಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಜ.10ರಂದು ವೈಕುಂಠ ಏಕಾದಶಿಯನ್ನು ವಿಜೃಂಭಣೆಯಿಂದ ನೆರವೇರಿಸಲು ದೇವಸ್ಥಾನದ ಆಡಳಿತ ಮಂಡಳಿಯು ನಿರ್ಧರಿಸಿದೆ. ವೇದಮೂರ್ತಿ ಶ್ರೀ ರತ್ನಾಕರ ಭಟ್ ಇವರ ಉಪಸ್ಥಿತಿಯಲ್ಲಿ, ದೇವಸ್ಥಾನದಲ್ಲಿ ಬಾಹ್ಮೀ ಮುಹೂರ್ತದ ವೇಳೆ ಶ್ರೀಹರಿಗೆ ಮಹಾಭಿಷೇಕ, ಶ್ರೀವಿಷ್ಣು ಸಹಸ್ರನಾಮ ಮತ್ತು ತುಳಸಿ ಸರ್ವಲಂಕಾರ ಹಾಗೂ ಮಂತ್ರಘೋಷಗಳಿಂದ ಮಹಾ ಮಂಗಳಾರತಿ ನಡೆಯುತ್ತದೆ.
ಪೂಜೆಗೆ ದಂಪತಿ ಸಮೇತವಾಗಿ ಬರುವ ಭಕ್ತರಿಂದ ಪುಷ್ಪಾರ್ಚನೆ ನಡೆಯುತ್ತದೆ. ಆಂಜನೇಯ, ಗರುಡದೇವ ಹಾಗೂ ನವಗ್ರಹಗಳಿಗೆ ವಿಶೇಷ ಪೂಜೆ ಸಲ್ಲುತ್ತದೆ. ರಾತ್ರಿ 8 ಗಂಟೆಯವರೆಗೂ ದೇವರ ದರ್ಶನಕ್ಕೆ ಅವಕಾಶವಿದೆ.
ಆದ್ದರಿಂದ ಸವಿತಾ ಸಮಾಜದ ಸರ್ವ ಬಳಗ ಮತ್ತು ಸಮಸ್ತ ಸದ್ಭಕ್ತರು ಈ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾಗಬೇಕು ಹಾಗೂ ತನು-ಮನ-ಧನದಿಂದ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಮಾಜದ ಹಿರಿಯರಾದ ರಾಜು ಗೌಡರ, ಪಾಂಡಪ್ಪ ರಾಂಪೂರ, ಮಲ್ಲೇಶಪ್ಪ ಎಮ್.ರಾಂಪೂರ, ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಗಂಗಣ್ಣ ಗೌಡರ, ಪದಾಧಿಕಾರಿಗಳಾದ ಸತೀಶ ರಾಂಪೂರ, ಮಧುರಾಜ್ ಎಮ್.ರಾಂಪೂರ, ಮುರಳಿ ವಲ್ಲೂರ, ವೆಂಕಟೇಶ ರಾಂಪೂರ, ರಾಜು ರಾಂಪೂರ, ಶೇಖರ ನ್ಯಾವಿ, ವೆಂಕಟೇಶ ಬಳ್ಳಾರಿ, ಶ್ರೀಧರ ರಘುನಾಥನಳ್ಳಿ, ಮಂಜು ಗೌಡರ, ರಾಘವೇಂದ್ರ ಗೌಡರ ವಿನಂತಿಸಿದ್ದಾರೆ.