ವೈದ್ಯಕೀಯ ಕ್ಷೇತ್ರದಲ್ಲಿ ಗುಣಾತ್ಮಕ ಸಂಶೋಧನೆಗಳಾಗಿವೆ: ಡಾ. ವಿದ್ಯಾ ಥೋಬ್ಬಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಆಧುನಿಕತೆಯ ಇಂದಿನ ದಿನಗಳಲ್ಲಿ ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಗುಣಾತ್ಮಕ ಸಂಶೋಧನೆಗಳಾಗಿದ್ದು, ಬಂಜೆತನಕ್ಕೂ ಸಹ ಉತ್ತರವನ್ನು ಕಂಡುಕೊಳ್ಳಲಾಗಿದೆ ಎಂದು ಸ್ತ್ರೀರೋಗ, ಪ್ರಸೂತಿ ತಜ್ಞರ ಸಂಘದ ರಾಜ್ಯ ಸಂಘದ ಮಾಜಿ ಅಧ್ಯಕ್ಷೆ ಡಾ. ವಿದ್ಯಾ ಥೋಬ್ಬಿ ಹೇಳಿದರು.

Advertisement

ಅವರು ಗದಗ ಐಎಂಎ ಸಭಾಂಗಣದಲ್ಲಿ ಸ್ತ್ರೀರೋಗ, ಪ್ರಸೂತಿ ತಜ್ಞರ ಸಂಘವು ಗದಗ ಐಎಂಎ ಸಹಯೋಗದಲ್ಲಿ ಡಾ. ವ್ಹಿ.ಡಿ. ಚಾಫೇಕರ ಸ್ಮರಣಾರ್ಥ ಏರ್ಪಡಿಸಿದ್ದ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಥೈರಾಯ್ಡ್ನಲ್ಲಿ ಇತ್ತೀಚಿನ ಸುಧಾರಣೆಗಳು ವಿಷಯವಾಗಿ ಉಪನ್ಯಾಸ ನೀಡಿದರು.

ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹಿಮೋಗ್ಲೋಬಿನ್, ರಕ್ತದೊತ್ತಡ, ಮಧುಮೇಹ, ಥೈರಾಯ್ಡ್ ಕುರಿತು ಮಾಹಿತಿ ಹೊಂದಿರಬೇಕು ಹಾಗೂ ಮಹಿಳೆಯರು ಎಚ್‌ಪಿವ್ಹಿ ಲಸಿಕೆ ಹಾಕಿಸಿಕೊಳ್ಳುವದು ಮಹತ್ವದ್ದಾಗಿದೆ ಎಂದರು.

ಬೆAಗಳೂರಿನ ನೋವಾ ವೈದ್ಯಕೀಯ ನಿರ್ದೇಶಕ, ಹಿರಿಯ ಬಂಜೆತನ ಮತ್ತು ಐವ್ಹಿಎಫ್ ತಜ್ಞ ಡಾ. ಮಹೇಶ ಕೊರೆಗೋಲ್ ಅಂಡೋತ್ಪತ್ತಿ ಪ್ರಚೋದನೆ-ಸಲಹೆಗಳು ಮತ್ತು ತಂತ್ರಗಳು ವಿಷಯವಾಗಿ ಮಾತನಾಡಿದರು. ಹುಬ್ಬಳ್ಳಿಯ ಡಾ. ವಿಶ್ವನಾಥ್ ಶಿವನಗುತ್ತಿ ಅವರು ‘ಐಯುಐ ಯಶಸ್ಸಿನ ದರಗಳನ್ನು ಅತ್ಯುತ್ತಮವಾಗಿಸುವುದು’ ಹಾಗೂ ಗದುಗಿನ ಡಾ. ಅನುಪಮಾ ಪಾಟೀಲ ಅವರು ‘ವಿವರಿಸಲಾಗದ ಬಂಜೆತನ’ ವಿಷಯವಾಗಿ ಉಪನ್ಯಾಸ ನೀಡಿದರು.

ಡಾ. ಸವಿತಾ ಹೊಂಬಾಳಿ ಪ್ರಾರ್ಥಿಸಿದರು. ಸ್ತ್ರೀರೋಗ, ಪ್ರಸೂತಿ ತಜ್ಞರ ಸಂಘದ ಡಾ. ಪ್ರವೀಣ ಸಜ್ಜನರ ಸ್ವಾಗತಿಸಿದರು, ಕಾರ್ಯದರ್ಶಿ ಡಾ. ರಶ್ಮಿ ಪಾಟೀಲ ನಿರೂಪಿಸಿ ವಂದಿಸಿದರು.

ಸಮಾರಂಭದಲ್ಲಿ ಜಿಮ್ಸ್ನ ಡಾ. ಜಯಶ್ರೀ, ರಾಧಿಕಾ ಕುಲಕರ್ಣಿ, ಡಾ. ರಾಜೇಶ್ವರಿ ಕುರಡಗಿ, ಡಾ. ನಾಗರತ್ನಾ ಕೊಲೋಳಗಿ, ಡಾ. ಕುಬಿಹಾಳ, ಡಾ. ವಾಣಿ ಶಿವಪೂರ, ಡಾ. ಶೇಖರ ಸಜ್ಜನರ, ಡಾ. ಆರ್.ಎನ್. ಪಾಟೀಲ, ಖಜಾಂಚಿ ಡಾ. ತೇಜಸ್ವಿನಿ ಹಿರೇಮಠ, ಡಾ. ರಾಜಶೇಖರ ಪಾಟೀಲ, ಡಾ. ತುಕಾರಾಮ ಸೋರಿ ಮುಂತಾದವರಿದ್ದರು.

ಮಧ್ಯಾಹ್ನ ನಡೆದ ‘ಬಂಜೆತನದ ಪ್ರಕರಣಗಳ ನಿರ್ವಹಣೆ’ ಗುಂಪು ಚರ್ಚೆಯ ಅಧ್ಯಕ್ಷತೆಯನ್ನು ತಜ್ಞ ಡಾ. ಮಹೇಶ ಕೊರೆಗೋಲ್ ವಹಿಸಿದ್ದರು. ಈ ವೈದ್ಯಕೀಯ ಚರ್ಚೆಯಲ್ಲಿ ಡಾ. ಶಶಿಧರ್ ರೇಶ್ಮೆ, ಡಾ. ಅನುಪಮಾ ಪಾಟೀಲ, ಡಾ. ಪ್ರಭಾ ದೇಸಾಯಿ, ಡಾ. ಹನುಮಂತ್ ನಿಪ್ನಾಳ, ಡಾ. ವಿಶ್ವನಾಥ್ ಎನ್ ಶಿವನಗುತ್ತಿ, ಡಾ. ಶ್ರುತಿ ಪಾಟೀಲ ವಿಷಯ ಮಂಡಿಸಿದರು.

 


Spread the love

LEAVE A REPLY

Please enter your comment!
Please enter your name here