ಹಾಸ್ಯ ನಟ ಕಪಿಲ್ ಶರ್ಮಾ ಸೇರಿ ನಾಲ್ವರು ಬಾಲಿವುಡ್ ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ ಸಂದೇಶ

0
Spread the love

ಬಾಲಿವುಡ್ ನಟ ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ ಪ್ರಕರಣದ ಬೆನ್ನಲ್ಲೇ ಹಿಂದಿ ಚಿತ್ರರಂಗದ ಇನ್ನೂ ನಾಲ್ವರಿಗೆ ಸರಣಿ ಜೀವ ಬೆದರಿಕೆ ಬಂದಿದೆ. ಹಾಸ್ಯನಟ ಕಪಿಲ್ ಶರ್ಮಾ, ನಟ ರಾಜ್‌ಪಾಲ್ ಯಾದವ್, ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಮತ್ತು ಗಾಯಕಿ – ಹಾಸ್ಯ ನಟಿ ಸುಗಂಧ ಮಿಶ್ರಾ ಅವರಿಗೆ ಪಾಕಿಸ್ತಾನ ಮೂಲದ ಇ-ಮೇಲ್‌ನಿಂದ ಜೀವ ಬೆದರಿಕೆ ಬಂದಿದ್ದು ಈ ಬಗ್ಗೆ ಮುಂಬೈ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

ತಮಗೆ ಜೀವ ಬೆದರಿಕೆ ಸಂದೇಶ ಬಂದ ಬಗ್ಗೆ ನಾಲ್ವರು ಮುಂಬೈನ ಅಂಬೋಲಿ ಮತ್ತು ಓಶಿವಾರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ನಾವು ನಿಮ್ಮ ಇತ್ತೀಚಿನ ಎಲ್ಲಾ ಚಟುವಟಿಕೆಗಳನ್ನು ಗಮನಿಸುತ್ತಿದ್ದೇವೆ. ಇದು ಪ್ರಚಾರದ ಸ್ಟಂಟ್‌ ಅಲ್ಲ, ನಿಮಗೆ ಕಿರುಕುಳ ನೀಡುವ ಪ್ರಯತ್ನವೂ ಅಲ್ಲ. ಈ ಸಂದೇಶವನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿ. ನಾವು ಹೇಳಿದಂತೆ ಕೇಳದಿದ್ದರೆ, ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೂ ತೀವ್ರ ಪರಿಣಾಮ ಬೀರಬಹುದು. 8 ಗಂಟೆಗಳ ಒಳಗೆ ಈ ಸಂದೇಶಕ್ಕೆ ಪ್ರತಿಕ್ರಿಯಿಸಿ ಅಂತ ಇ-ಮೇಲ್‌ನಲ್ಲಿ ಬೆದರಿಕೆ ಹಾಕಲಾಗಿದೆ.

ಬೆದರಿಕೆ ಬಂದ ಇಮೇಲ್‌ ವಿಳಾಸ ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿರುವುದಾಗಿ ಮುಂಬೈ ಪೊಲೀಸ್‌ ಮೂಲಗಳು ತಿಳಿಸಿವೆ.


Spread the love

LEAVE A REPLY

Please enter your comment!
Please enter your name here