ಬಾಲಿವುಡ್ ಮಿಸ್ಟರ್ ಫರ್ಫೆಕ್ಷನಿಸ್ಟ್ ನಟ ಆಮೀರ್ ಖಾನ್ ಈಗಾಗಲೇ ಎರಡು ಮದುವೆಯಾಗಿ ಡಿವೋರ್ಸ್ ಪಡೆದುಕೊಂಡಿದ್ದಾರೆ. ಇದೀಗ ಬೆಂಗಳೂರಿನ ಬ್ಯೂಟಿ ಜೊತೆ 3ನೇ ಮದುವೆಯಾಗಲು ಸಜ್ಜಾಗಿದ್ದು 59ನೇ ವಯಸ್ಸಿನಲ್ಲಿ ನಟ ಮದುವೆಯಾಗುತ್ತಿರುವ ಸುದ್ದಿ ಕೇಳಿ ಫ್ಯಾನ್ಸ್ ಆಚ್ಚರಿ ಪಟ್ಟಿದ್ದಾರೆ.
ಈಗಾಗಲೇ ರೀನಾ ದತ್ತ ಜೊತೆ ಹದಿನಾರು ವರ್ಷ ಮತ್ತು ಕಿರಣ್ ರಾವ್ ಅವರ ಜೊತೆ ಕೂಡ ಹದಿನಾರು ವರ್ಷ ಸಂಸಾರ ಮಾಡಿ ಡಿವೋರ್ಸ್ ಪಡೆದುಕೊಂಡಿರುವ ಆಮೀರ್ ಖಾನ್ ಇದೀಗ ಮತ್ತೊಂದು ಮದುವೆಯಾಗಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಮಗಳಿಗೆ ಮದುವೆ ಮಾಡಿರುವ ನಟ ಇದೀಗ ತಾವು ಮದುವೆಯಾಗೋಕೆ ಮುಂದಾಗಿದ್ದಾರೆ.
ಈ ಹಿಂದೆ ಅಮೀರ್ ಖಾನ್ ಹೆಸರು ಹಿಂದೆ ದಂಗಲ್ ಚಿತ್ರದ ನಾಯಕಿ ಫಾತಿಮಾ ಸನಾ ಶೇಖ್ ಜೊತೆ ಥಳುಕು ಹಾಕಿಕೊಂಡಿತ್ತು. ಕಿರಣ್ ರಾವ್ ಅವರಿಂದ ಅಮೀರ್ ದೂರವಾಗಲು ಇದೇ ಕಾರಣವೆಂದು ಕೂಡ ಹೇಳಲಾಗಿತ್ತು. ಹೀಗಾಗಿಯೇ ಫಾತಿಮಾ ಸನಾ ಶೇಖ್ ಅವರ ಜೊತೆ ಅಮೀರ್ ಮದುವೆಯಾಗಬಹುದು ಎಂದು ಅನೇಕರು ಅಂದುಕೊಂಡಿದ್ದರು. ಆದರೆ, ಅಮೀರ್ ಖಾನ್ ಮದುವೆಯಾಗಲು ಸಿದ್ಧವಾಗಿರುವುದು ಫಾತಿಮಾ ಸನಾ ಶೇಖ್ ಅವರ ಜೊತೆ ಅಲ್ಲ ಬದಲಿಗೆ ಬೆಂಗಳೂರಿನ ಚೆಲುವೆಯ ಜೊತೆಗೆ ಎನ್ನವ ಸುದ್ದಿ ವೈರಲ್ ಆಗಿದೆ.
ಅಮೀರ್ ಖಾನ್ ತೀರಾ ಇತ್ತೀಚೆಗೆ ತಮ್ಮ ಹೊಸ ಪ್ರಿಯತಮೆಯನ್ನು ತನ್ನ ಇಬ್ಬರು ಮಾಜಿ ಪತ್ನಿಯರಿಗೆ ಮತ್ತು ತಮ್ಮ ಮೂವರು ಮಕ್ಕಳಿಗೆ ಪರಿಚಯಿಸಿದ್ದಾರೆ, ಎಲ್ಲರೂ ಜೊತೆಯಲ್ಲಿಯೇ ಕುಳಿತು ಭರ್ಜರಿ ಭೋಜನವನ್ನು ಮಾಡಿದ್ದಾರಂತೆ. ಆದರೆ ಆಮೀರ್ ಮನಸೋತ ಬೆಂಗಳೂರು ಬ್ಯೂಟಿ ಯಾರು? ಆಕೆಯ ಹಿನ್ನೆಲೆ ಏನು ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ.