ಗದಗ `ಅಪರಾಧ ಮುಕ್ತ ಜಿಲ್ಲೆ’ಯಾಗಲಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಮನುಷ್ಯ ಸಮಾಜಜೀವಿಯಾಗಿದ್ದು, ಎಲ್ಲ ಸಮುದಾಯದವರು ಇತರೇ ಸಮಾಜದೊಂದಿಗೆ ಪರಸ್ಪರ ಸ್ನೇಹ, ಸೌಹಾರ್ದತೆ, ಮಾನವೀಯತೆಯೊಂದಿಗೆ ಬಾಳಬೇಕು ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೇಳಿದರು.

Advertisement

ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ ಉದ್ದೇಶಿಸಿ ಮಾತನಾಡಿದರು.

ಗದಗ ಜಿಲ್ಲೆ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದ್ದು, ಅಪರಾಧ ಮುಕ್ತ ಜಿಲ್ಲೆಯಾಗಬೇಕು ಮತ್ತು ಸಾರ್ವಜನಿಕರು ನೆಮ್ಮದಿಯ ಜೀವನ ನಡೆಸಬೇಕು. ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ನಡೆಯುವ ಸಣ್ಣಪುಟ್ಟ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕಾರಿಗಳೇ ನೇರವಾಗಿ ಹೋಗಿ ಮಾತುಕತೆಯೊಂದಿಗೆ ಬಗೆಹರಿಸಬೇಕು. ಇದಕ್ಕೆ ಆಯಾ ಸಮಾಜದ ಮುಖಂಡರ ಸಹಕಾರ ಅಗತ್ಯವಾಗಿದೆ. ಜಿಲ್ಲೆಯಲ್ಲಿ ಕಳ್ಳತನ ಸೇರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಾದ್ಯಂತ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಲಕ್ಮೇಶ್ವರಕ್ಕೆ ಸಂರ್ಕಿಸುವ ರಸ್ತೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ. ಕಳೆದ ವರ್ಷದಿಂದ ಥರ್ಡ್ ಐ ಕ್ಯಾಮೆರಾ ಅಳವಡಿಸಿದ ಮೇಲೆ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಕಡಿಮೆಯಾಗಿವೆ ಮತ್ತು ಪತ್ತೆ ಹಚ್ಚಲು ಸಹಾಯಕವಾಗಿವೆ ಎಂದರು.

ಈ ಸಂದರ್ಭದಲ್ಲಿ ಜಯಮ್ಮ ಕಳ್ಳಿ, ಸುರೇಶ ನಂದೆಣ್ಣವರ, ಪಿ.ಬಿ. ಕರಾಟೆ, ಫಕ್ಕೀರೇಶ ಮ್ಯಾಟಣ್ಣವರ, ರಾಮಣ್ಣ ಲಮಾಣಿ (ಶಿಗ್ಲಿ), ಯಲ್ಲಪ್ಪ ತಳವಾರ, ಎನ್.ಆರ್. ಸಾತಪುತೆ, ಜಗದೀಶ ಹುಲಿಗೆಮ್ಮನವರ, ಟಾಕಪ್ಪ ಸಾತಪುತೆ, ಕೆ.ಓ. ಹುಲಿಕಟ್ಟಿ, ಕಾರ್ತಿಕ ದೊಡ್ಡಮನಿ, ಮಲ್ಲೇಶ ಮಣ್ಣಮ್ಮನವರ, ಮಂಜುನಾಥ ಶೀತಮ್ಮನವರ, ಫಕ್ಕೀರೇಶ ಭಜಕ್ಕನವರ, ಸಂತೋಷ ನಂದೆಣ್ಣವರ, ಸಂತೋಷ ಹಾದಿಮನಿ, ಪರಮೇಶ ಹಳೇರಿತ್ತಿ, ಹನುಮಪ್ಪ ಹರಿಜನ, ಮಹಾಂತೇಶ, ಮುಶೆಪ್ಪನವರ ಸೇರಿದಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮುಖಂಡರು ಇದ್ದರು.

ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ನಾಗರಾಜ ಗಡದ, ಅಪರಾಧ ವಿಭಾಗದ ಪಿಎಸ್‌ಐ ಟಿ.ಕೆ. ರಾಠೋಡ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.

ಎಸ್‌ಸಿಎಸ್‌ಟಿ ಮುಖಂಡರು ಮಾತನಾಡಿ, ಕೆಲವು ಗ್ರಾಮಗಳ ಹೋಟೆಲ್, ಕ್ಷೌರದ ಅಂಗಡಿಗಳಲ್ಲಿ ಸಮುದಾಯದ ಜನರಿಗೆ ಮೀನಾಮೇಷ ಮಾಡುತ್ತಿದ್ದಾರೆ. ಸಮುದಾಯದ ಜನರಿಗೆ ಸ್ಮಶಾನ ಭೂಮಿ ಸಮಸ್ಯೆಯಿದೆ. ಇರುವ ಸರ್ಕಾರದ ಯೋಜನೆ, ಸೌಲಭ್ಯಗಳು ಸಂಬAಧಪಟ್ಟ ಅಧಿಕಾರಿಗಳಿಂದ ತಿಳಿಸುವ ಕಾರ್ಯವಾಗುತ್ತಿಲ್ಲ ಎಂದರು.


Spread the love

LEAVE A REPLY

Please enter your comment!
Please enter your name here