ಧಾರವಾಡ: ಆನ್ ಲೈನ್ ಗೇಮ್ ಚಟದಿಂದ ಐಐಟಿ ಸ್ಟಾಫ್ ನರ್ಸ್ ನೇಣಿಗೆ ಶರಣಾಗಿರುವ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ. ನಾಗರಾಜ್ ಶಿವಪ್ಪ ಉಳವಣ್ಣವರ(30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು,
ಆನ್ ಲೈನ್ ಗೇಮ್ ನಲ್ಲಿ 20 ಲಕ್ಷಕ್ಕೂ ಹೆಚ್ಚು ಕಳೆದುಕೊಂಡಿದ್ದು, ತೀವ್ರ ನಷ್ಟಕ್ಕೊಳಗಾಗಿದ್ದರು. ಇದರಿಂದ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಇನ್ನೂ ಈ ಘಟನೆ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



