ಲಿಂಗಾಯತ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಲಿಂಗಾಯತ ನೌಕರರ ಸಂಘದ ಗದಗ ಘಟಕದ ವತಿಯಿಂದ 2025ರ ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಿವ್ಹಿಲ್ ವಿಭಾಗದ ಮುಖ್ಯಸ್ಥರಾದ ಡಾ. ಕೆ.ಲೋಕೇಶ ವಹಿಸಿದ್ದರು.

Advertisement

ಮುಖ್ಯ ಅತಿಥಿಗಳಾಗಿ ಮೆಕ್ಯಾನಿಕಲ್ ವಿಭಾಗದ ಡಾ. ದಯಾನಂದ ಗೌಡರ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ರಮೇಶ ಬಡಿಗೇರ, ಪ್ರೊ. ನಿಂಗಪ್ಪ ಪೂಜಾರ, ಪ್ರೊ. ಪ್ರಸನ್ನ ನಾಡಗೌಡ, ಪ್ರೊ. ನೀತಾ ಮುದರೆಡ್ಡಿ, ಡಾ. ಅಶ್ವಿನಿ ಅರಳಿ, ಪ್ರೊ. ಸೌಮ್ಯ ಪಾಟೀಲ, ಪ್ರೊ. ಪ್ರವೀಣ ಜ್ಯೋತಿ, ಪ್ರೊ. ಸುನೀಲ್ ಬೇಗಮ್‌ಪುರ, ನಿಂಗಪ್ಪ ಅಣ್ಣಿಗೇರಿ, ಶರಣಪ್ಪ ಗೋಡಿ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ಅಧ್ಯಾಪಕರು ಹಾಜರಿದ್ದರು.

ಗದಗ ಜಿಲ್ಲಾ ಲಿಂಗಾಯತ ನೌಕರರ ಸಂಘದ ಅಧ್ಯಕ್ಷರಾದ ಡಾ. ಸಂಗಪ್ಪ ಗಾಣಿಗೇರ ಲಿಂಗಾಯತ ನೌಕರರ ಸಂಘದ ಬಗ್ಗೆ ವಿವರಿಸಿದರು. ಸಂಘದ ಕಾರ್ಯದರ್ಶಿಗಳಾದ ಡಾ. ಬಸನಗೌಡ ಪಾಟೀಲ ಇದ್ದರು.


Spread the love

LEAVE A REPLY

Please enter your comment!
Please enter your name here