ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್ ಅವರು, ಇತ್ತೀಚೆಗೆ ಬೇಲ್ ಮೇಲೆ ಹೊರ ಬಂದಿದ್ದಾರೆ.
ಅಲ್ಲದೇ ಇಂದು ಅವರಿಗೆ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಸಹಜವಾಗಿ ಆಪ್ತರು, ಸಿನಿ ತಾರೆಯರು, ಅಭಿಮಾನಿಗಳು ನಟ ದರ್ಶನ್‌ಗೆ ವಿಶ್ ಮಾಡುತ್ತಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಕೂಡ ಫ್ರೆಂಡ್ ದರ್ಶನ್‌ಗೆ ವಿಶ್ ಮಾಡಿ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿದ್ದಾರೆ.
ದರ್ಶನ್ ಹುಟ್ಟುಹಬ್ಬಕ್ಕೆ ನಟಿ ರಕ್ಷಿತಾ ಪ್ರೇಮ್ ವಿಶೇಷವಾಗಿ ಶುಭಕೋರಿದ್ದಾರೆ. ‘ಇವತ್ತು ವಿಶೇಷ ದಿನ, ಯಾಕ್ ಗೊತ್ತಾ? ಇವತ್ತು ನನ್ನ ಬೆಸ್ಟ್ ಫ್ರೆಂಡ್ ಬರ್ತ್‌ಡೇ. ಇವರು ಯಾವಾಗಲೂ ಕಷ್ಟ-ಸುಖದಲ್ಲಿ ಒಂದೇ ರೀತಿಯಲ್ಲಿ ಜೊತೆಗಿದ್ದವರು. ಇವರು ಜೊತೆಗಿರುವ ಜೀವನ ಯಾವಾಗಲೂ ಉತ್ತಮವಾಗಿರುತ್ತದೆ. ನೀವು ನನಗೆ ಸ್ಪೆಷಲ್. ನಿಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಶುಭ ಹಾರೈಸುತ್ತೇನೆ. ಯಾವಾಗಲೂ ಸ್ಪೆಷಲ್ ಆಗೇ ಇರ್ತೀಯ, ಲವ್ ಯೂ’ ಎಂದು ಶುಭಹಾರೈಸಿದ್ದಾರೆ.