HomeGadag Newsನರೇಗಲ್ಲ ಹೋಬಳಿಯಲ್ಲಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ

ನರೇಗಲ್ಲ ಹೋಬಳಿಯಲ್ಲಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿಯವರ ಸತ್ಯ ಸಂಕಲ್ಪದAತೆ ಗಜೇಂದ್ರಗಡ ತಾಲೂಕಾ ಪ್ರಥಮ ಸಾಹಿತ್ಯ ಸಮ್ಮೇಳನ ನಿಡಗುಂದಿಕೊಪ್ಪದ ಶ್ರೀಮಠದಲ್ಲಿ ಫೆ. 20ರಂದು ನಡೆಯಲಿದೆ. ಈ ನಿಮಿತ್ಯ ನಡೆದ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ನರೇಗಲ್ಲ ಹೋಬಳಿಯಲ್ಲಿ ಬುಧವಾರ ಸಂಚರಿಸಿ ಜಕ್ಕಲಿ, ಬೂದಿಹಾಳ, ಮಲ್ಲಾಪೂರ, ನರೇಗಲ್ಲ, ಮಾರನಬಸರಿ ಮತ್ತು ನಿಡಗುಂದಿಗಳಲ್ಲಿ ಕನ್ನಡದ ಕಂಪನ್ನು ಪಸರಿಸಿತು.

ಜಕ್ಕಲಿಯ ಅಂದಾನಪ್ಪ ದೊಡ್ಡಮೇಟಿಯವರ ಮನೆಯಿಂದ ಹೊರಟ ಮೆರವಣಿಗೆಗೆ ನಿಡಗುಂದಿಕೊಪ್ಪದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮತ್ತು ಧುರೀಣ ಮಿಥುನ್ ಜಿ.ಪಾಟೀಲ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಿಥುನ್ ಪಾಟೀಲ ಮಾತನಾಡಿ, ಮೈಸೂರು ರಾಜ್ಯವೆಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ನಾಡಿಗೆ ಕರ್ನಾಟಕವೆಂದು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಹೋರಾಟವನ್ನು ಪ್ರಾರಂಭಿಸಿದವರು ಅಂದಾನಪ್ಪ ದೊಡ್ಡಮೇಟಿಯವರು. ತಮ್ಮ ಚಿತ್ತಭಿತ್ತಿಯಲ್ಲಿ ಮೂಡಿದ ತಾಯಿ ಭುವನೇಶ್ವರಿಯ ಚಿತ್ರವನ್ನು ಮೊತ್ತಮೊದಲು ಬರೆಯಿಸಿದವರೂ ಅವರೇ. ಅವರ ನೆಲದಿಂದ ಹೊರಟ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಕನ್ನಡದ ಕಂಪನ್ನು ಬೀರಲಿ ಎಂದು ಹಾರೈಸಿದರು.

ಈ ವೇಳೆ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ತಾಲೂಕಾ ಅಧ್ಯಕ್ಷ ಅಮರೇಶ ಗಾಣಿಗೇರ, ಹೋಬಳಿ ಘಟಕದ ಅಧ್ಯಕ್ಷ ಎಂ.ವಿ. ವೀರಾಪೂರ, ಸರ್ವಾಧ್ಯಕ್ಷ ಎಂ.ಎ. ಹಿರೆವಡೆಯರ, ರವೀಂದ್ರನಾಥ ದೊಡ್ಡಮೇಟಿ, ಸಂದೇಶ ದೊಡ್ಡಮೇಟಿ, ಹರ್ಷವರ್ಧನ ದೊಡ್ಡಮೇಟಿ, ಚನ್ನಬಸವ ದೊಡ್ಡಮೇಟಿ, ದೊಡ್ಡಮೇಟಿ ಕುಟುಂಬದ ಸದಸ್ಯರು, ಅಂದಪ್ಪ ಬಿಚ್ಚೂರ, ಅಶೋಕಪ್ಪ ಯಾವಗಲ್ಲ, ಎಂ.ಎಸ್. ದಢೇಸೂರಮಠ, ಎಂ.ಎಸ್. ಕೋರಿ, ಗಂಗಮ್ಮ ಜಂಗಮ್ಮನವರ, ಮಲ್ಲಣ್ಣ ಮೇಟಿ, ಎಸ್.ಎಸ್. ರಿತ್ತಿ, ಯಲ್ಲವ್ವ ಮಾದರ, ನಿಡಗುಂದಿ, ನಿಡಗುಂದಿಕೊಪ್ಪ, ನರೇಗಲ್ಲ, ಬೂದಿಹಾಳ, ಮಲ್ಲಾಪೂರ, ಮಾರನಬಸರಿಯ ಗ್ರಾಮಸ್ಥರು, ಇತರರಿದ್ದರು.

ನರೇಗಲ್ಲದಲ್ಲಿ: ಭುವನೇಶ್ವರಿ ತಾಯಿ ರಥಯಾತ್ರೆಯು ನರೇಗಲ್ಲಿಗೆ ಬಂದಾಗ ಪಟ್ಟಣ ಪಂಚಾಯತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಚೇರಮನ್ ಮುತ್ತಪ್ಪ ನೂಲ್ಕಿ ಮತ್ತು ಸಿಬ್ಬಂದಿಯವರು ಹಾರ್ದಿಕವಾಗಿ ಬರಮಾಡಿಕೊಂಡರು.

ಅಧ್ಯಕ್ಷ ಫಕೀರಪ್ಪ ಮಳ್ಳಿ ಮಾತನಾಡಿ, ಕನ್ನಡಾಂಬೆಯ ತೇರನ್ನು ತಿಂಗಳಲ್ಲಿ ಎರಡನೇ ಬಾರಿಗೆ ಎಳೆಯುವ ಅದೃಷ್ಟ ನಮ್ಮ ನರೇಗಲ್ಲ ಜನತೆಗೆ ದೊರಕಿದ್ದು ಪುಣ್ಯ ವಿಶೇಷ. ಈ ಅವಕಾಶವನ್ನು ಒದಗಿಸಿಕೊಟ್ಟ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳವರಿಗೆ ನಾವೆಷ್ಟು ಕೃತಜ್ಞರಾಗಿದ್ದರೂ ಕಡಿಮೆ ಎಂದರು.

ಹೋಬಳಿ ಘಟಕದ ಅಧ್ಯಕ್ಷ ಎಂ.ವಿ. ವೀರಾಪೂರ, ಕಳಕನಗೌಡ ಪೊಲೀಸ್‌ಪಾಟೀಲ, ಶೇಕಪ್ಪ ಕೆಂಗಾರ, ಮೈಲಾರಪ್ಪ ಚಳ್ಳಮರದ, ಅಲ್ಲಾಭಕ್ಷಿ ನದಾಫ್, ಪಟ್ಟಣದ ವಿವಿಧ ಶಾಲೆಗಳ ಮುಖ್ಯಸ್ಥರು, ಸಿಬ್ಬಂದಿಯವರು ಉಪಸ್ಥಿತರಿದ್ದರು.

ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಗಜೇಂದ್ರಗಡ ತಾಲೂಕು ಆದ ನಂತರ ಈವರೆಗೆ ತಾಲೂಕಾ ಸಮ್ಮೇಳನವೆ ನಡೆದಿರಲಿಲ್ಲ. ನಮ್ಮ ಶ್ರೀಮಠದ ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಈ ಕಾರ್ಯವನ್ನು ನಾವೇಕೆ ನಿರ್ವಹಿಸಬಾರದು ಎಂದು ನಮ್ಮ ಗುರುಗಳ ಅಪ್ಪಣೆಯಾಯಿತು. ಅದರಂತೆ ಸಿದ್ಧತೆ ಮಾಡಿಕೊಂಡು ಎಲ್ಲ ರೀತಿಯ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದೇವೆ. ಪ್ರಪ್ರಥಮ ತಾಲೂಕಾ ಸಮ್ಮೇಳನವನ್ನು ನೆರವೇರಿಸಿದೆವು ಎಂಬ ಹೆಮ್ಮೆ, ಅಭಿಮಾನ ನಿಡಗುಂದಿಕೊಪ್ಪದ ಗ್ರಾಮಸ್ಥರಿಗೆ ಮತ್ತು ಶ್ರೀಮಠದ ಎಲ್ಲ ಸದ್ಭಕ್ತರಿಗಿದೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!