ತುಮಕೂರು:- ಕರ್ನಾಟಕದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಕೇಂದ್ರ ಸಚಿವ ವಿ ಸೋಮಣ್ಣ ಅವರು ಲೇವಡಿ ಮಾಡಿದ್ದಾರೆ.
ತಿಪಟೂರಿನಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಹಣ ಬಿಡುಗಡೆ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿಗಳನ್ನು ಇಮಾಮ್ ಸಾಬಿಗೆ ಹೋಲಿಕೆ ಮಾಡಿ, ಕಿಸಾನ್ ಸಮ್ಮಾನ್ ಯೋಜನೆಯನ್ನ ಗೋಕುಲಾಷ್ಟಮಿಗೆ ಹೋಲಿಕೆ ಮಾಡಿದ್ದಾರೆ.
ಇಮಾಮ್ ಸಾಬಿಗೂ ಗೋಕುಲಾಷ್ಠಮಿ ಗೂ ಸಂಬಂಧ ಇದಿಯಾ? ಇಮಾಮ್ ಸಾಬಿನೆ ಬೇರೆ, ಗೋಕುಲಾಷ್ಠಮಿನೇ ಬೇರೆ. ನಮ್ಮ ಹಬ್ಬ ಬೇರೆ, ಅವರ ಹಬ್ಬ ಬೇರೆ. ಎರಡು ಒಂದೇ ಅಲ್ಲ. ಗ್ಯಾರಂಟಿಕ್ಕಿಂತ ಕಿಸಾನ್ ಸನ್ಮಾನ್ ಯೋಜನೆಯೇ ಮೇಲೂ. ಎರಡು ಒಂದೇ ಹಬ್ಬಗಳು ಎನ್ನಲು ಆಗಲ್ಲ. ರಾಷ್ಟ್ರದ ಬೆನ್ನೆಲುಬಾಗಿರುವ ರೈತರಿಗೆ ಆಶಾಕಿರಣ ಇದು.
ಈಗಾಗಲೇ ಗ್ಯಾರಂಟಿ ಯೋಜನೆಗಳು ನಿಂತು ಹೋಗಿದೆ. ನಮ್ದು ಹಂಗಿಲ್ಲ. ಮೂರು-ಮೂರು ತಿಂಗಳಿಗೂ ಒಂದೊಂದು ಕಂತು ಬರ್ತಿದೆ. ದೊಡ್ಡ ಯೋಜನೆಗಳನ್ನ ವೋಟ್ ಬ್ಯಾಂಕ್ ಯೋಜನೆಗಳಿಗೆ ಹೋಲಿಕೆ ಮಾಡಬೇಡಿ. ಪ್ರಧಾನ ಮಂತ್ರಿಗಳು ಇದನ್ನ ನಾನು ಮಾಡ್ತಿನಿ ಅಂತ ಎಲ್ಲೂ ಹೇಳಿರಲಿಲ್ಲ. ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಅವರ ಚಿಂತನೆ, ಮುಂದಿನ ಪೀಳಿಗೆಗೆ ದೂರದೃಷ್ಟಿಗೆ ಹಿಡಿದ ಕೈಗನ್ನಡಿಯಾಗಿದೆ. ಗ್ಯಾರಂಟಿ ಯೋಜನೆಗೆ ಇದನ್ನ ಹೋಲಿಕೆ ಮಾಡಬೇಡಿ ಎಂದು ವಿ ಸೋಮಣ್ಣ ಹೇಳಿದ್ದಾರೆ.



