ವಿಜಯಸಾಕ್ಷಿ ಸುದ್ದಿ, ಗದಗ
ಬಸ್ ಕಂಡಕ್ಟರ್, ಇಬ್ಬರು ವರ್ತಕರು ಸೇರಿದಂತೆ ಎಂಟು ಜನರ ತಂಡವೊಂದು ಗದ್ದಿಹಳ್ಳದಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಬೆಟಗೇರಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ಇದನ್ನೂ ಓದಿ ಐಪಿಎಲ್ ಬೆಟ್ಟಿಂಗ್; ಮೂವರು ಬಂಧನ
ಸಮೀಪದ ಗದ್ದಿಹಳ್ಳದ ದಂಡೆಯಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದ ಹಿರೇಕೊಪ್ಪದ ಸುರೇಶ್ ತುಕ್ಕಪ್ಪ ಗಿಡ್ಡಮಲ್ಲಣ್ಣವರ, ಕಿರಟಗೇರಿಯ ಅಪ್ಪಾಸಾಬ್ ಫಕ್ಕೀರಸಾಬ್ ನದಾಫ್, ಹುಡ್ಕೋ ಕಾಲೋನಿಯ ಪಾನ್ ಶಾಪ ಉದ್ಯೋಗಿ ಭಾಸ್ಕರ್ ದೇವೇಂದ್ರಸಾ ಮೆರೆವಾಡೆ, ಇಡ್ಲಿ ವ್ಯಾಪಾರಿ ವಿನೋದ ಪ್ರಕಾಶ್ ಬಾಕಳೆ, ಬಸ್ ಕಂಡಕ್ಟರ್ ಕಮ್ ವ್ಯಾಪಾರಿ, ಸಪ್ತಗಿರಿ ಬಾರ್ ಹತ್ತಿರದ ನಿವಾಸಿ ಬಸವರಾಜ್ ಪ್ರಭಯ್ಯ ಗಿರಿಮಠ, ನರಸಾಪೂರದ ರಮೇಶ್ ಬಸಪ್ಪ ತಾಳಿಕೋಟಿ, ಶಿವಾನಂದ ವೀರಪ್ಪ ಕರಿಗೌಡ್ರ, ಬೆಟಗೇರಿಯ ಹೊಸಪೇಟೆ ಚೆಕ್ ನ ಖಾಸಗಿ ಉದ್ಯೋಗಿ ಅಜರುದ್ದೀನ್ ಮಾಬುಸಾಬ್ ಮಕಾನದಾರ ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತರಿಂದ 30 ಸಾವಿರ ರೂ,ಗಳನ್ನು ವಶಪಡಿಸಿಕೊಂಡಿರುವ ಪಿಎಸ್ಐ ರಾಜೇಶ್ ಬಟಗುರ್ಕಿ ತನಿಖೆ ಕೈಗೊಂಡಿದ್ದಾರೆ.
ದಾಳಿಯ ವೇಳೆ ಬೆಟಗೇರಿ ಭಾಗದ ಉದ್ಯಮಿಯೊಬ್ಬ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆದರೆ ಕೆಲ ಮೂಲಗಳು ಬೇರೆ ಬೇರೆ ಕತೆ ಹೇಳುತ್ತಿದ್ದಾರೆ. ಈ ಜೂಜಾಟಕ್ಕೆ ಆತನೇ ಫೈನಾನ್ಸ್ ಮಾಡುತ್ತಿದ್ದ. ಆದರೆ ಆತ ಪರಾರಿಯಾಗಲು ಹೇಗೆ ಸಾಧ್ಯ ಎಂದು ಮೂಲಗಳು ತಿಳಿಸಿವೆ.