ನಟಿ, ನಿರ್ಮಾಪಕಿ ಮೇಘಾ ಶೆಟ್ಟಿ ಅವರು, ಕಾಲಿವುಡ್ ನತ್ತ ಮುಖ ಮಾಡಿದ್ದು, ಬಿಗ್ ಚಾನ್ಸ್ ಬಾಚಿಕೊಂಡಿದ್ದಾರೆ.
Advertisement
ತಮಿಳಿನ ನಟ ಕಮ್ ನಿರ್ದೇಶಕ ಶಶಿಕುಮಾರ್ ಅವರ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶವನ್ನು ಮೇಘಾ ಶೆಟ್ಟಿ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಕಾಲಿವುಡ್‌ಗೆ ಮತ್ತೋರ್ವ ಕನ್ನಡತಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇದೀಗ ಈ ಚಿತ್ರದ ಮುಹೂರ್ತ ಸಮಾರಂಭ ಸರಳವಾಗಿ ಜರುಗಿದೆ. ಈ ಪ್ರಾಜೆಕ್ಟ್ ಕುರಿತು ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ.
ಸದ್ಯ ಹೊಸ ಬಗೆಯ ಪಾತ್ರ ಹಾಗೂ ಕಥೆಗೆ ಮೇಘಾ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಕನ್ನಡದ ಆಪರೇಷನ್ ಲಂಡನ್ ಕೆಫೆ, ಗ್ರಾಮಾಯಣ, ಚೀತಾ ಸೇರಿದಂತೆ ಹಲವು ಚಿತ್ರಗಳು ನಟಿಯ ಕೈಯಲ್ಲಿವೆ. ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿದ ಮೇಘಾ ಶೆಟ್ಟಿ ಇದೀಗ ಜನಪ್ರಿಯ ನಟಿ ಆಗಿದ್ದಾರೆ.