HomeGadag Newsಪುರಸಭೆಯ ಕ್ರಮಕ್ಕೆ ಮಾಂಸ ಮಾರಾಟಗಾರರ ವಿರೋಧ

ಪುರಸಭೆಯ ಕ್ರಮಕ್ಕೆ ಮಾಂಸ ಮಾರಾಟಗಾರರ ವಿರೋಧ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಾಲ್ಕಿ ಹಕ್ಕಿನಲ್ಲಿರುವ(ಸ್ವಂತ) ಅಂಗಡಿಯಲ್ಲಿ ಹಿಂದಿನಿಂದಲೂ ಕೋಳಿ ಮಾಂಸ ವ್ಯಾಪಾರ ಮಾಡುತ್ತಾ ಬರುತ್ತಿರುವುದನ್ನು ಬಂದ್ ಮಾಡಬೇಕು ಎಂಬ ಪುರಸಭೆಯವರ ಕ್ರಮ ವಿರೋಧಿಸಿ ಪಟ್ಟಣದ ನನ್ನುಸಾಬ ಹುಸೇನಸಾಬ ಮಕಾನದಾರ ಕುಟುಂಬದವರು ಮಂಗಳವಾರ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ನನ್ನುಸಾಬ ಮಕಾನದಾರ ಮಾತನಾಡಿ, ವ್ಯಾಪಾರ ಮಾಡುತ್ತಿರುವ ಜಾಗೆಯು ನನ್ನ ತಂದೆಯವರ ಹೆಸರಿನಲ್ಲಿದೆ. ಇಲ್ಲಿ ಹಲವಾರು ವರ್ಷಗಳಿಂದ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದೇವೆ. ಅಲ್ಲದೆ ಕೋಳಿ ಮಾಂಸ ವ್ಯಾಪಾರಕ್ಕಾಗಿ ಪುರಸಭೆಯಿಂದ ಲೈಸನ್ಸ್ ಸಹ ಪಡೆದಿರುತ್ತೇವೆ. ಆದರೆ ಪುರಸಭೆ ಅಧಿಕಾರಿಗಳು ಪದೇ ಪದೇ ಅಂಗಡಿಗೆ ಬಂದು ನಮಗೆ ಅಂಗಡಿ ತೆರವು ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ನಾವು ನೊಂದುಕೊಂಡಿದ್ದು, ಪುರಸಭೆಯವರ ಕ್ರಮ ಖಂಡಿಸಿ ಪ್ರತಿಭಟನೆಗೆ ಇಳಿದಿದ್ದೇವೆ. ಇದನ್ನು ಕೂಡಲೇ ನಿಲ್ಲಿಸಬೇಕೆಂದು ವಿನಂತಿಸಿದರು.

ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತರ ಅಹವಾಲು ಆಲಿಸಿ, ಪುರಸಭೆಯವರು ಯಾರ ವಿರುದ್ಧವೂ ವೈಯಕ್ತಿಕ ದ್ವೇಷ ಮಾಡುವುದಿಲ್ಲ. ಕಾನೂನಿನನ್ವಯ ಮತ್ತು ಮೇಲಾಧಿಕಾರಿಗಳ ಸೂಚನೆಯಂತೆ ಕ್ರಮ ಕೈಗೊಂಡಿರುತ್ತಾರೆ. ಈ ಕುರಿತಂತೆ ಕೂಲಂಕುಷವಾಗಿ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಜರುಗಿಸುತ್ತೇವೆ ಎಂದು ಹೇಳಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಈ ವೇಳೆ ನೂರಅಹ್ಮದ್ ಮಕಾನದಾರ, ಸೈಯದ್ ಮಕಾನದಾರ, ಮಹ್ಮದ್‌ಹನೀಫ್ ಮಕಾನದಾರ, ಮಹ್ಮದ್‌ಸಾದಿಕ್ ಮಕಾನದಾರ, ಪಿರಾಂಭಿ ಮಕಾನದಾರ, ಅಮೀನಬೀ ಮಕಾನದಾರ, ಜುಬೇದಾ ಮಕಾನದಾರ, ಜಬೀನಾ ಮಕಾನದಾರ, ಪರ್ವಿನ್ ಮಕಾನದಾರ ಸೇರಿದಂತೆ ಅನೇಕರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!