ಸಚಿವ ಎಚ್.ಕೆ. ಪಾಟೀಲರಿಂದ ಕಟ್ಟಡದ ಭೂಮಿಪೂಜೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಹುಲಕೋಟಿಯ ಆರ್‌ಟಿಇ ಸೊಸೈಟಿಯ ರೂರಲ್ ಇಂಜಿನಿಯರಿಂಗ್ ಕಾಲೇಜು ಪ್ರಸ್ತುತ ಗದಗ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡುತ್ತಿದೆ.

Advertisement

1980ರ ದಶಕದಲ್ಲಿ ಈ ಭಾಗದ ಜನರ ತಾಂತ್ರಿಕ ಶಿಕ್ಷಣ ವಿದ್ಯಾಭ್ಯಾಸಕ್ಕಾಗಿ ಆರ್‌ಟಿಇ ಸೊಸೈಟಿಯ ರೂರಲ್ ಇಂಜಿನಿಯರಿಂಗ್ ಕಾಲೇಜು ಹುಲಕೋಟಿ ಹುಟ್ಟುಹಾಕುಲ್ಲಿ ಸಹಕಾರಿ ರಂಗದ ಭೀಷ್ಮ ಎಂದೇ ಬಿರುದು ಪಡೆದ ದಿವಂಗತ ಕೆ.ಎಚ್. ಪಾಟೀಲರ ಕೊಡುಗೆ ಅವಿಸ್ಮರಣೀಯವಾಗಿದೆ.

ದಿವಂಗತ ಕೆ.ಎಚ್. ಪಾಟೀಲರ 100ನೇ ಜನ್ಮದಿನಾಚರಣೆ ಅಂಗವಾಗಿ ಆರ್.ಟಿ.ಇ. ಸೊಸೈಟಿಯ ರೂರಲ್ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನೂತನ ಗ್ರಂಥಾಲಯ ಹಾಗೂ ಬೋಧನಾ ಕೊಠಡಿಗಳ ಕಟ್ಟಡದ ಭೂಮಿ ಪೂಜೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವರಾದ ಡಾ. ಎಚ್.ಕೆ. ಪಾಟೀಲ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಆರ್.ಟಿ.ಇ. ಸೊಸ್ಶೆಟಿಯ ಅಧ್ಯಕ್ಷ ಎಸ್.ಕೆ. ಪಾಟೀಲ, ಕಾರ್ಯದರ್ಶಿ ಸಚಿನ್ ಪಾಟೀಲ, ನಿರ್ದೇಶಕರಾದ ಡಾ. ಅರವಿಂದ ಡಿ.ಪಾಟೀಲ, ದೀಪಕ ಎಂ.ಪಾಟೀಲ, ರಂಗನಗೌಡ ಪಿ.ಪಾಟೀಲ, ಕೃಷ್ಣಗೌಡ ಎಚ್.ಪಾಟೀಲ, ಡಾ. ಎಸ್.ಆರ್. ನಾಗನೂರ, ಡಾ. ವೇಮನ ಆರ್.ಸಾವಕಾರ, ಆರ್.ಎಮ್. ಮೂಲಿಮನಿ, ಸಿ.ಬಿ. ಕರಿಕಟ್ಟಿ, ಪ್ರಕಾಶಗೌಡ ಪಾಟೀಲ, ಶ್ರೇಯಸ್ ಆರ್.ಮೂಲಿಮನಿ, ಆರ್.ಆರ್. ಓದುಗೌಡ್ರ, ಆರ್.ಆರ್. ಸಾವಕಾರ, ಆರ್‌ಇಸಿ ಪ್ರಾಚಾರ್ಯ ಡಾ. ವ್ಹಿ.ಎಂ. ಪಾಟೀಲ, ಎಸ್.ಟಿ. ವಾಸನ, ಆರ್.ಪಿ.ಟಿ. ಪ್ರಾಚಾರ್ಯ ಕೃಷ್ಣಾ ಓದುಗೌಡರ, ಹುಲಕೋಟಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಗ್ರಾಮದ ಗುರು-ಹಿರಿಯರು, ಆರ್.ಟಿ.ಇ. ಸೊಸೈಟಿಯ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here