ಧಾರವಾಡ: ಮಹಿಂದ್ರಾ ಥಾರ್ ವಾಹನ ತಾಂತ್ರಿಕ ದೋಷದಿಂದ ರಸ್ತೆ ಮಧ್ಯೆದಲ್ಲೇ ಸುಟ್ಟು ಭಸ್ಮವಾದ ಘಟನೆ ಧಾರವಾಡದ ಸವದತ್ತಿ ರಸ್ತೆಯಲ್ಲಿಯ ಕಾಶಿನಗರದ ಬಳಿ ನಡೆದಿದೆ.
ಧಾರವಾಡದಿಂದ ಸವದತ್ತಿಗೆ ಹೊರಟಿದ್ದ ಮಹಿಂದ್ರಾ ಥಾರ್ ಕಾರ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.
ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ, ಬೆಂಕಿ ನಂದಿಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



