ವಿಜಯಪುರ:– ಹನಿಟ್ರ್ಯಾಪ್ ತನಿಖೆ CBI ಮೂಲಕವೇ ಆಗಬೇಕು ಎಂದು ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ಗೆ ಯತ್ನಾಳ್ ಪತ್ರ ಬರೆದಿದ್ದಾರೆ.
Advertisement
ಹನಿಟ್ರ‍್ಯಾಪ್ ವಿಚಾರ ಪ್ರಸ್ತಾಪಿಸಿ ಪತ್ರ ಬರೆದಿರುವ ಯತ್ನಾಳ್, ಜನಪ್ರತಿನಿಧಿಗಳನ್ನ ಟಾರ್ಗೆಟ್ ಮಾಡಿ ಹನಿಟ್ರ‍್ಯಾಪ್ ಮಾಡಲಾಗುತ್ತಿದೆ. ಜನಪ್ರತಿನಿಧಿಗಳ ಭದ್ರತೆಗಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಮೂಲಕ ನೀವು ಜನಪ್ರತಿನಿಧಿಗಳ ಘನತೆ ಕಾಪಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಹನಿಟ್ರ‍್ಯಾಪ್ ಪ್ರಕರಣದ ತನಿಖೆಗೆ ನಡೆಸಬೇಕು. ಸಿಬಿಐ ಮೂಲಕವೇ ಹನಿಟ್ರ‍್ಯಾಪ್ ಪ್ರಕರಣ ತನಿಖೆಯಾಗಲಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.