ಸಧ್ಯಕ್ಕಿಲ್ಲ ಆಟೋ ದರ ಏರಿಕೆ: ಬೆಂಗಳೂರಿಗರು ನಿರಾಳ!

0
Spread the love

ಬೆಂಗಳೂರು:- ಏ.1ರಿಂದ ಆಟೋ ಪ್ರಯಾಣ ದರ ಏರಿಕೆ ಆಗುತ್ತದೆ ಎಂದು ಕಂಗಾಲಾಗಿದ್ದ ಬೆಂಗಳೂರಿಗರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬಸ್, ಮೆಟ್ರೋ ದರ ಏರಿಕೆಯಿಂದಾಗಿ ಕಂಗೆಟ್ಟಿರುವ ಸಿಟಿ ಮಂದಿಗೆ ರಿಲ್ಯಾಕ್ಸ್ ಆಗುವ ಸುದ್ದಿ ಸಿಕ್ಕಿದ್ದು, ಏ.1ರಿಂದ ಆಟೋ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

Advertisement

ಈ ವರ್ಷದ ಆರಂಭದಿಂದಲೂ ನಿತ್ಯ ದರ ಏರಿಕೆ ಸುದ್ದಿ ಕೇಳಿ ಬೆಂಗಳೂರಿಗರು ಬೇಸತ್ತಿದ್ದರು. ಬಸ್, ಮೆಟ್ರೋ ದರ, ನೀರಿನ ದರ ಏರಿಕೆ ಬಳಿಕ ಏ.1ರಿಂದ ಆಟೋ ದರ ಕೂಡ ಏರಿಕೆಯಾಗಲಿದೆ ಎಂದು ಕೇಳಿಬರುತ್ತಿತ್ತು. ಆದರೆ ಇದೀಗ ಆಟೋ ದರ ಏರಿಕೆಗೆ ಜಿಲ್ಲಾಡಳಿತ ತಡೆ ನೀಡಿದೆ.

ಅತ್ತ ಜನ ನಿಟ್ಟುಸಿರು ಬಿಟ್ಟರೆ, ಇತ್ತ ಆಟೋ ಚಾಲಕರಿಗೆ ಕೊಂಚ ಬೇಸರವಾಗಿದೆ. ಆಟೋ ದರ ಪರಿಷ್ಕರಣೆ ಸಂಬಂಧ ವಾರದ ಹಿಂದೆಯಷ್ಟೇ ಸಾರಿಗೆ ಇಲಾಖೆಯು ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಏ.1ರಿಂದ ದರ ಏರಿಕೆ ಆಗುತ್ತದೆ ಎಂದು ಆಟೋ ಚಾಲಕರು ಖುಷಿಯಲ್ಲಿದ್ದರು. ಆದರೆ ಬೆಂಗಳೂರು ಡಿಸಿ ಮಾತ್ರ ಸದ್ಯಕ್ಕೆ ಆಟೋ ದರ ಏರಿಕೆ ಇಲ್ಲ, ದರ ಏರಿಕೆ ಸಂಬಂಧ ಸಾರಿಗೆ ಇಲಾಖೆಯಿಂದ ಸಭೆ ಮಾಡಿ ರಿಪೋರ್ಟ್ ಸಿದ್ಧಪಡಿಸಬೇಕಿದೆ. ಆ ನಂತರ ಮತ್ತೊಂದು ಮೀಟಿಂಗ್ ಮಾಡಿ ದರ ಏರಿಕೆ ನಿರ್ಧಾರ ಆಗಬೇಕು. ದರ ಏರಿಕೆ ಎಷ್ಟಾಗುತ್ತೆ? ಹೇಗೆ ಎನ್ನುವ ತೀರ್ಮಾನ ಆಗಲಿದೆ. ಈ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಿ, ದರ ಪರಿಷ್ಕರಣೆ ಫೈನಲ್ ಆಗಬೇಕಾದರೆ ಇನ್ನೂ ಹೆಚ್ಚಿನ ಕಾಲಾವಕಾಶ ಬೇಕಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here