ಬೆಳಗಾವಿ: ಯತ್ನಾಳ್ ಆಗಲಿ ನಾನಾಗಲಿ ನಮ್ಮ ಟೀಂ ಆಗಲಿ ಬಿಜೆಪಿಯಲ್ಲೇ ಮುಂದುವರೆಯುತ್ತೇವೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಕಡೆಯಿಂದ ಹೈಕಮಾಂಡ್ಗೆ ಪತ್ರ ಬರೆಸುತ್ತೇವೆ.
Advertisement
ಪುನಃ ಮರುಪರಿಶೀಲನೆ ಮಾಡುತ್ತೇವೆ ಮನವಿ ಮಾಡುತ್ತೇವೆ. ಯತ್ನಾಳ್ ಆಗಲಿ ನಾನಾಗಲಿ ನಮ್ಮ ಟೀಂ ಆಗಲಿ ಬಿಜೆಪಿಯಲ್ಲೇ ಮುಂದುವರೆಯುತ್ತೇವೆ ಎಂದರು. ಉಚ್ಚಾಟನೆಯಾಗಲು ಯಾರ ಕೈವಾಡ ಇದೆ ಎನ್ನುವುದನ್ನು ನಾನು ಹೇಳುವುದಿಲ್ಲ. ಯತ್ನಾಳ್ ಅವರು ಒಂಟಿಯಾಗಿಲ್ಲ ನಾವು ಗಟ್ಟಿಯಾಗಿದ್ದೇವೆ.
ಅವರ ಪರ ನಾವಿದ್ದೇವೆ ಎಂದು ತಿಳಿಸಿದರು. ಯತ್ನಾಳ್ ಅವರು ಪಕ್ಷದ ದೊಡ್ಡ ನಾಯಕರು. ಇವತ್ತು ನಮ್ಮ ಪಕ್ಷ ನಿರ್ಧಾರ ಯಾಕೆ ತೆಗೆದುಕೊಂಡಿದೆ ಗೊತ್ತಿಲ್ಲ. ಪಕ್ಷದ ನಿರ್ಣಯ ಪ್ರಶ್ನಿಸುವ ದೊಡ್ಡ ವ್ಯಕ್ತಿ ನಾನಲ್ಲ. ನಾಳೆ ಎಲ್ಲ ನಾಯಕರು ಬೆಂಗಳೂರಿನಲ್ಲಿ ಚರ್ಚೆ ಮಾಡುತ್ತೇವೆ ಎಂದರು.