HomePolitics Newsಯಶವಂತರಾಯಗೌಡ ಪಾಟೀಲ್ ರಾಜೀನಾಮೆಗೆ ಮುಂದಾಗಿದ್ದು ರೈತರಿಗಾಗಿ, ಕೊಟ್ಟು-ಕೊಳ್ಳುವ' ರಾಜಕೀಯಕ್ಕಲ್ಲ: ಡಿ.ಕೆ. ಶಿವಕುಮಾರ್

ಯಶವಂತರಾಯಗೌಡ ಪಾಟೀಲ್ ರಾಜೀನಾಮೆಗೆ ಮುಂದಾಗಿದ್ದು ರೈತರಿಗಾಗಿ, ಕೊಟ್ಟು-ಕೊಳ್ಳುವ’ ರಾಜಕೀಯಕ್ಕಲ್ಲ: ಡಿ.ಕೆ. ಶಿವಕುಮಾರ್

For Dai;y Updates Join Our whatsapp Group

ಬೆಂಗಳೂರು: ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ರಾಜೀನಾಮೆಗೆ ಮುಂದಾಗಿರುವುದು ರೈತರ ಬದುಕಿಗಾಗಿಯೇ ಹೊರತು, ಈ ಹಿಂದೆ ಈಶ್ವರಪ್ಪ ಅವರು ಹೇಳಿದ್ದ 15 ಶಾಸಕರ ‘ಕೊಟ್ಟು-ಕೊಳ್ಳುವ’ ರಾಜೀನಾಮೆಯ ರೀತಿಯಲ್ಲ ಎಂದು ಸಿಎಂ ಡಿ.ಕೆ. ಶಿವಕುಮಾರ್ ವಿಪಕ್ಷಗಳ ಆರೋಪಕ್ಕೆ ಕಟುವಾಗಿ ತಿರುಗೇಟು ನೀಡಿದ್ದಾರೆ.

ವಿಧಾನಸಭೆಯಲ್ಲಿ ಬುಧವಾರ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ, ಪ್ರತಿಪಕ್ಷದ ನಾಯಕರು ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ಪತ್ರದ ಪ್ರತಿಯನ್ನು ಸದನದಲ್ಲಿ ಪ್ರದರ್ಶಿಸಿ ಭಾರಿ ಗದ್ದಲ ಎಬ್ಬಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ವಿರೋಧ ಪಕ್ಷದವರು ಬಹಳ ಆತುರದಲ್ಲಿ ರಾಜಕಾರಣ ಮಾಡಲು ಬಡಿದಾಡುತ್ತಿದ್ದಾರೆ. ಕೇವಲ ರಾಜಕೀಯ ಮಾಡುವ ಉದ್ದೇಶದಿಂದ ಕಳೆದ ಅಧಿವೇಶನದಲ್ಲೂ ಬರದ ಬಗ್ಗೆ ಚರ್ಚಿಸಲು ವಿಪಕ್ಷಗಳು ಅವಕಾಶ ನೀಡಿರಲಿಲ್ಲ. ಇಂದು ಪ್ರತಿಯೊಬ್ಬ ಶಾಸಕರಿಗೂ ತಮ್ಮ ಕ್ಷೇತ್ರದ ಜನರ ಸಮಸ್ಯೆ ಹೇಳಿಕೊಳ್ಳಲು ಅವಕಾಶ ಸಿಗಲಿ ಎಂದೇ ಈ ವಿಶೇಷ ಅಧಿವೇಶನ ನಡೆಸಲಾಗುತ್ತಿದೆ” ಎಂದರು.

 ರಾಜ್ಯಾದ್ಯಂತ ಎದುರಾಗಿರುವ ಭೀಕರ ಬರಗಾಲದ ಸ್ಥಿತಿಯನ್ನು ವಿವರಿಸಿದ ಅವರು, “ನಾನು ಗದಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ರೈತರು ಸಾಲ ಮಾಡಿ ಬೆಳೆ ಹಾಕಿದ್ದು, ಅವರಿಗೆ ಪರಿಹಾರ ದೊರೆಯಲೇಬೇಕು. ಆದರೆ ಯಾವುದೇ ಪ್ರದೇಶವನ್ನು ಬರಪೀಡಿತ ಎಂದು ಘೋಷಿಸಲು ನಿರ್ದಿಷ್ಟ ಮಾನದಂಡಗಳಿವೆ.

21 ದಿನಗಳ ಕಾಲ ಮಳೆಯಾಗದಿರುವುದು ಹಾಗೂ ನಿರ್ದಿಷ್ಟ ಪ್ರಮಾಣದ ಮಳೆ ಅಭಾವವಿರಬೇಕಾಗುತ್ತದೆ. ನಾವು ವರದಿ ಕಳುಹಿಸಿದ ಬಳಿಕ ಕೇಂದ್ರ ಸರ್ಕಾರವೇ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಬರ ಘೋಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಪರಮೇಶ್ವರ್ ಅವರಿಗೆ ವಹಿಸಲಾಗಿದೆ” ಎಂದು ತಿಳಿಸಿದರು.

 ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಮೋಡ ಬಿತ್ತನೆ ಪ್ರಯತ್ನಕ್ಕೂ ಮುಂದಾಗಿದೆ ಎಂದ ಅವರು, “ಅಗತ್ಯ ಮೋಡಗಳು ಬಂದಾಗಷ್ಟೇ ಬಿತ್ತನೆ ಯಶಸ್ವಿಯಾಗಲು ಸಾಧ್ಯ. ಕೆಲವು ಭಾಗಗಳಲ್ಲಿ ಯಶಸ್ವಿಯಾಗಿದ್ದರೆ, ಮತ್ತೆ ಕೆಲವು ಕಡೆ ಸಾಧಿಸಲು ಸಾಧ್ಯವಾಗಿಲ್ಲ. ಹೆಚ್.ಕೆ. ಪಾಟೀಲರಂತಹ ಹಿರಿಯ ನಾಯಕರ ಮೇಲೆಯೇ ಕ್ಷೇತ್ರದ ಜನರ ದೊಡ್ಡ ಒತ್ತಡವಿರುವಾಗ, ನಮ್ಮ ಶಾಸಕರಾದ ಯಶವಂತರಾಯಗೌಡ ಪಾಟೀಲ್ ಅವರು ಬೇಸರಗೊಂಡಿರುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದು ಸಮರ್ಥಿಸಿಕೊಂಡರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img