ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದ ಯತ್ನಾಳ್ ಅಭಿಮಾನಿ ಅಪಘಾತದಲ್ಲಿ ಸಾವು..!

0
Spread the love

ವಿಜಯಪುರ: ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆ ಹಿನ್ನೆಲೆಯಲ್ಲಿ ಯತ್ನಾಳ್ ಬೆಂಬಲಿಸಿ ನಿನ್ನೆ ರಾಜೀನಾಮೆ ನೀಡಿದ್ದ ಪದಾಧಿಕಾರಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

Advertisement

ಬಿಜೆಪಿ ನಗರ ಎಸ್ಟಿ ಮೋರ್ಚಾದ ಕಾರ್ಯದರ್ಶಿ ಸಂತೋಷ್ ತಟಗಾರ ಮೃತ ಪದಾಧಿಕಾರಿಯಾಗಿದ್ದು, ಸಂತೋಪ್ ತಟಗಾರ ಪ್ರಯಾಣಿಸುತ್ತಿದ್ದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ.

ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರಬಹುದು. ಆದರೆ ಜನರ‌ ಮನಸ್ಸಿನಿಂದ ಉಚ್ಛಾಟನೆ ಮಾಡುವುದಕ್ಕೆ ಆಗಲ್ಲ. ವೇಟ್ ಆ್ಯಂಡ್ ಸಿ. ಬಿಜೆಪಿಗೆ ಭಾವಪೂರ್ವ ಶ್ರದ್ಧಾಂಜಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾವಿಗೂ ಮುನ್ನ ಸಂತೋಷ್ ತಟಗಾರ ಪೋಸ್ಟ್ ಹಂಚಿಕೊಂಡಿದ್ದರು.


Spread the love

LEAVE A REPLY

Please enter your comment!
Please enter your name here