ಮಧ್ಯಪ್ರದೇಶ:– ಸಾಲು-ಸಾಲು ಲವ್ ಬ್ರೇಕಪ್ ನಿಂದ ಮನನೊಂದ ಯುವಕನೋರ್ವ ಹುಡುಗಿ ಸಿಗದೇ ಮೇಕೆ ಮದುವೆಯಾಗಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ಜರುಗಿದೆ.
ಮೇಕೆ ಮದುವೆಯಾದ ಯುವಕನನ್ನು ಇಲ್ಲಿನ 27 ವರ್ಷದ ಭಗವಾನ್ ಸಿಂಗ್ ಎಂದು ಗುರುತಿಸಲಾಗಿದೆ. ಹಿಂದೂ ಸಂಪ್ರದಾಯದಂತೆಯೇ ಆ ಮೇಕೆಯನ್ನು ಮದುವೆಯಾಗಿದ್ದು, ಆ ಮೇಕೆಯ ಹೆಸರನ್ನು ಪೂಜಾ ಎಂದು ಗುರುತಿಸಲಾಗಿದೆ. ಕಳೆದ ಹಲವು ತಿಂಗಳಿನಿಂದ ನಾನು ಈ ಮೇಕೆಯನ್ನು ಆರೈಕೆ ಮಾಡುತ್ತಿದ್ದೇನೆ. ಅದು ಅಷ್ಟೇ ನನ್ನನ್ನು ಹಚ್ಚಿಕೊಂಡಿದೆ. ಹೀಗಾಗಿಯೇ ಈ ಮೇಕೆಯನ್ನೇ ಮದುವೆಯಾಗಲು ತೀರ್ಮಾನಿಸಿದ್ದೇನೆ ಎಂದು ಭಗವಾನ್ ಸಿಂಗ್ ಹೇಳಿದ್ದಾನೆ.
ಈ ಹಿಂದೆ ಆದ ನಿರಂತರ ಪ್ರೇಮ ವೈಫಲ್ಯಗಳು, ದಾಟುತ್ತಿರುವ ವಯಸ್ಸು ಮತ್ತು ವಯೋಸಹಜವಾಗಿ ಕಾಡುವ ಮದುವೆ ಎಂಬ ಬಂಧನದ ವ್ಯಾಮೋಹ ಇವೆಲ್ಲವನ್ನು ಅನುಭವಿಸಿ. ಸಾಕಾಗಿ ಕೊನೆಗೆ ಪ್ರಾಣಿಗಳೇ ಗುಣದಲಿ ಮೇಲು ಮಾನವನದಕ್ಕಿಂತ ಕೀಳು ಎನ್ನುವಂತೆ ತಾನು ಸಾಕಿ ಸಲುಹಿದ ಮೇಕೆಯನ್ನೇ ಆತ ಮದುವೆಯಾಗಿದ್ದಾನೆ. ಮೇಕೆಗೆ ಪತ್ನಿಯ ಸ್ಥಾನ ನೀಡಿದ್ದಾನೆ. ಏಕಾಂಗಿ ಯಾನದಲ್ಲಿ ಗುರಿ ಮರೆತಿರುವ ಅಲೆಮಾರಿಗೆ ಸಾಕ್ಷಿಯಾಗಿ ಭಗವಾನ್ ಸಿಂಗ್ ನಿಂತಿದ್ದಾನೆ. ಸದ್ಯ ಈ ಒಂದು ಸುದ್ದಿ ಹಾಗೂ ಸಿಂಗ್ ಮೇಕೆಯನ್ನು ಮದುವೆಯಾಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.