ನಟಿ ರಾಗಿಣಿ ದ್ವಿವೇದಿ ತುಪ್ಪದ ಬೆಡಗಿ ಅಂತಾಲೇ ಸ್ಯಾಂಡಲ್ ವುಡ್ ನಲ್ಲಿ ಫೇಮಸ್. ತುಪ್ಪದ ಹುಡುಗಿ’ ರಾಗಿಣಿ ದ್ವಿವೇದಿ ‘ಅಂದ’ ದಿನದಿಂದ ದಿನಕ್ಕೆ ಹೆಚ್ಚಾಗುವಂತೆ ಕಾಣುತ್ತಿದೆ. ಸದ್ಯ ಯುಗಾದಿ ಹಬ್ಬದ ಪ್ರಯುಕ್ತ ಹೊಸದೊಂದು ಫೋಟೋಶೂಟ್ ಅನ್ನು ರಾಗಿಣಿ ಮಾಡಿಸಿದ್ದಾರೆ. ಈ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಎಸ್, ನಟಿ ರಾಗಿಣಿ ದ್ವಿವೇದಿ ಅವರು ಈ ಬಾರಿ ತುಂಬಾ ವಿಭಿನ್ನವಾಗಿ, ವಿಶೇಷವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಗೋಲ್ಡ್ ಕಲರ್ ಸ್ಯಾರಿಯಲ್ಲಿ ಕಾಣಿಸಿರುವ ರಾಗಿಣಿ, ದುಂಡು ಮಲ್ಲಿಗೆ ಹೂವುಗಳ ಹಾರದಿಂದ ತಯಾರಿಸಿದ ರವಿಕೆ ಧರಿಸಿ ಮೋಹಕವಾಗಿ, ಮನಮೋಹಕವಾಗಿ ಪೋಸ್ ಕೊಟ್ಟಿದ್ದಾರೆ. ಒಂದೊಂದು ಫೋಟೋ ಕೂಡ ಯುವಕರ ಕಣ್ಮನ ಸೆಳೆಯುವಂತೆ ಸೊಗಸಾಗಿ ಇವೆ.
ಯುಗಾದಿ ಹಬ್ಬಕ್ಕೆ ತುಪ್ಪದ ಬೆಡಗಿಯ ವಿಭಿನ್ನವಾದ ಫೋಟೋಶೂಟ್ ಮಾಡಿಸಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಸುರಿಮಳೆ ಬರುತ್ತಿವೆ. ಹೊಸ ವರ್ಷ, ಹೊಸ ಚಾಪ್ಟರ್, ನಿರೀಕ್ಷೆಯೊಂದಿಗೆ ಪ್ರತಿ ಬೆಳಗಿನ ಜಾವವು ಹೊಸ ಅವಕಾಶ ನೀಡುತ್ತದೆ. ಅದನ್ನೇ ಅದ್ಭುತವಾಗಿ ರೂಪಿಸಿಕೊಳ್ಳಿ, ಬದುಕಿನಲ್ಲಿ ಯಶಸ್ಸು, ಸಮೃದ್ಧಿ ಸಿಗಲಿ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.
ಇನ್ನೂ ರಾಗಿಣಿ ದ್ವಿವೇದಿ ಅವರು ಸ್ಯಾಂಡಲ್ವುಡ್ ಮಾತ್ರವಲ್ಲ, ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ಸಿನಿಮಾಗಳಲ್ಲೂ ಅಭಿನಯ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ಸಿನಿಮಾಗಳಲ್ಲಿನ ಐಟಂ ಸಾಂಗ್ಗಳಲ್ಲೂ ರಾಗಿಣಿ ಅವರು ಸ್ಟೆಪ್ಸ್ ಹಾಕುತ್ತಿದ್ದಾರೆ.


