ಬೆಳಗಾವಿ:- ಬೆಳಗಾವಿಯ ನ್ಯೂ ವೈಭವ ನಗರದಲ್ಲಿ ಐಫೋನ್ ತಗೊಂಡಿದ್ದನ್ನ ತಂದೆ ಪ್ರಶ್ನಿಸಿದ್ದಕ್ಕೆ ಮಗ ನೇಣಿಗೆ ಶರಣಾಗಿರುವ ಘಟನೆ ಜರುಗಿದೆ.
24 ವರ್ಷದ ಮುಸ್ತಫೀಸ್ ಅಬ್ದುಲ್ ರಶೀದ್ ಶೇಖ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಯುವಕನು, ಇಎಂಐ ಮಾಡಿಸಿ 70 ಸಾವಿರ ಬೆಲೆಯ ಐಫೋನ್ ತಂದಿದ್ದ. ಈ ವಿಚಾರ ಗೊತ್ತಾಗಿ ಇಷ್ಟೊಂದು ಹಣ ಕೊಟ್ಟು ಯಾಕೆ ಮೊಬೈಲ್ ತಗೊಂಡಿದ್ಯಾ? ಕಡಿಮೆ ದರದ ಮೊಬೈಲ್ ತಗೋಬೇಕಿತ್ತು ಎಂದು ತಂದೆ ಬುದ್ದಿ ಹೇಳಿದ್ದಾರೆ. ಇದರಿಂದ ಮನನೊಂದು ಯುವಕ ಮನೆಯಲ್ಲೇ ರೂಮ್ ನಲ್ಲಿ ನೇಣಿಗೆ ಶರಣಾಗಿದ್ದಾನೆ.
ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



