ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನಗರದ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ದಕ ಟ್ರಸ್ಟನ ಶ್ರೀ ಗವಿಸಿದ್ಧೇಶ್ವರ ನರ್ಸಿಂಗ್ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ ಲಭಿಸಿದೆ.
Advertisement
ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸೆಸ್ ಇವರು2024-25ನೇ ಸಾಲಿನ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದ್ದು, ಕಾಲೇಜಿನ ಭಾವನಾ ಪ್ರಥಮ (ಶೇ.81.5), ಪವಿತ್ರಾ ದ್ವಿತೀಯ (ಶೇ.78.2), ದೀಪಾ ತೃತೀಯ (ಶೇ.77.4) ಸ್ಥಾನದಲ್ಲಿ ತೇರ್ಗಡೆ ಹೊದಿದ್ದಾರೆ. ಒಟ್ಟು 37 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 30 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.