HomeBengaluru Newsಮದುವೆಯಾದ 10 ದಿನಕ್ಕೆ ಪತಿ ನಾಪತ್ತೆ; ಗಂಡನಿಗಾಗಿ ಟವರ್ ಏರಿದ ನವವಧು!

ಮದುವೆಯಾದ 10 ದಿನಕ್ಕೆ ಪತಿ ನಾಪತ್ತೆ; ಗಂಡನಿಗಾಗಿ ಟವರ್ ಏರಿದ ನವವಧು!

For Dai;y Updates Join Our whatsapp Group

ಬೆಂಗಳೂರು: ಮದುವೆಯಾದ ಕೇವಲ 10 ದಿನಗಳಲ್ಲೇ ಪತಿ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿ, ಆತನನ್ನು ಹುಡುಕಿಕೊಡುವಂತೆ ಒತ್ತಾಯಿಸಿ ನವವಧು ಒಬ್ಬಳು ಮೊಬೈಲ್ ಟವರ್ ಏರಿದ ಘಟನೆ ನೆಲಮಂಗಲ ಸಮೀಪದ ಮಾಕಳಿ ಗ್ರಾಮದಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಪಾವಗಡ ಮೂಲದ ಸಿಂಧು (20), ಅಕ್ಟೋಬರ್ 6ರಂದು ಗಣೇಶ್ ಎಂಬಾತನನ್ನು ವಿವಾಹವಾಗಿದ್ದಳು. ಮದುವೆಯ ಬಳಿಕ ಗಣೇಶ್ ಮನೆ ಬಿಟ್ಟು ಹೋಗಿದ್ದಾನೆ ಎನ್ನಲಾಗಿದ್ದು, ಆತನನ್ನು ಹುಡುಕಿಕೊಡುವಂತೆ ಸಿಂಧು ಪೊಲೀಸರ ಮೊರೆ ಹೋಗಿದ್ದಳು.

ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಪತಿ ಪತ್ತೆಯಾಗದ ಹಿನ್ನೆಲೆಯಲ್ಲಿ ಸಿಂಧು ಕಳೆದ ಎರಡು ದಿನಗಳಿಂದ ಪ್ರತಿಭಟನೆಯ ಹಾದಿ ಹಿಡಿದಿದ್ದಾಳೆ. ಅಕ್ಟೋಬರ್ 19ರಂದು ಮೊಬೈಲ್ ಟವರ್ ಏರಿದ್ದ ಆಕೆಯನ್ನು ಪೊಲೀಸರು ಮನವೊಲಿಸಿ ಕೆಳಗಿಳಿಸಿದ್ದರು.

ಆದರೆ, ಅಕ್ಟೋಬರ್ 20ರಂದು ಆಯುಧಪೂಜೆಯ ದಿನವೂ ಮತ್ತೆ ಟವರ್ ಏರಿ, ತನ್ನ ಪತಿಯನ್ನು ಹುಡುಕಿಕೊಡುವಂತೆ ಪಟ್ಟು ಹಿಡಿದಿದ್ದಾಳೆ. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಹರಸಾಹಸಪಟ್ಟು ಆಕೆಯನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.

ಬಳಿಕ ಸಿಂಧುವನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ನಾಪತ್ತೆಯಾಗಿರುವ ಪ್ರಕರಣ ಇದೀಗ ಸ್ಥಳೀಯ ವಲಯದಲ್ಲಿ ಗಮನ ಸೆಳೆದಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img